Wednesday, January 22, 2025

ಮೋದಿಗೆ ಸ್ತ್ರೀ ಇಂದ ಕಂಟಕ ಇದೆ, ಮಹಿಳೆ ದೇಶವನ್ನ ಆಳ್ತಾಳೆ : ಗುರೂಜಿ ಭವಿಷ್ಯ

ತುಮಕೂರು : ನರೇಂದ್ರ ಮೋದಿಯವರ ಜನ್ಮ ಲಗ್ನ ಜಾತಕ ನೋಡಿದಾಗ ಸ್ತ್ರೀ ಅವರಿಗೆ ಕಂಟಕಳಾಗ್ತಾಳೆ. ಅವರಿಗೆ ಸ್ತ್ರೀ ಕಂಟಕವಾಗಿ ರಾಜಕಾರಣದಲ್ಲಿ ಹಿನ್ನಡೆಯಾಗುತ್ತೆ. ಅವರ ಗ್ರಹಗತಿಗಳು ಹೇಳ್ತಾ ಇರೋದು, ನಾನಲ್ಲ ಎಂದು ನೊಣವಿಕೆರೆ ಕಾಲಜ್ಞಾನಿ ಜ್ಯೋತಿಷಿ ಯಶ್ವಂತ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

ತುಮಕೂರಿನ ನೊಣವಿನಕೆರೆಯಲ್ಲಿ ಮಾತನಾಡಿರುವ ಅವರು, ನರೇಂದ್ರ ಮೋದಿ ಅವರಿಗೆ ಸ್ತ್ರೀ ಇಂದ ಕಂಟಕ ಇದೆ. ಅಂದ್ರೆ ಎಲ್ಲಾ ಸ್ತ್ರೀಯರ ಕೂಟದಿಂದ ಕಂಟಕ ಆಗುತ್ತೆ ಅಂತ ಹೇಳಬಹುದು. ರಾಜ್ಯ ರಾಜಕಾರಣದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ ಹೇಳಿದ್ವಿ, ಅದು ನಿಜವಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಮಿತ್ರ ಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತೆ. ಸ್ತ್ರೀ ಆಡಳಿತ ನಡೆಸೋದಾಗಿ ಕಾಲಜ್ಞಾನ ಭವಿಷ್ಯ ಹೇಳಿದೆ. ಅಧಿಕಾರದ ಚುಕ್ಕಾಣಿ ಇಡಿಯಲಿದೆ ಮಹಿಳಾ‌ ಶಕ್ತಿ ಕೂಟ. ರಾಷ್ಟ್ರ ರಾಜಕಾರಣದಲ್ಲಿ ಮಹಾಶಿವರಾತ್ರಿ ಬಳಿಕ ದೊಡ್ಡ ಬದಲಾವಣೆಗಳು ಪ್ರಾರಂಭವಾಗ್ತವೆ. ಮುಂದಿನ ದಿನ ಮಾನದಲ್ಲಿ ಯಾರು ಪ್ರಧಾನಿ ಆಗ್ತಾರೆ ಅನ್ನೋದಾದ್ರೆ ಸ್ತ್ರೀ ದೇಶ ಆಡಳಿತ ಮಾಡೋದಾಗಿ ಕಾಲಜ್ಞಾನ ಹೇಳುತ್ತಿದೆ ಎಂದು ನುಡಿದಿದ್ದಾರೆ.

ಸ್ತ್ರೀ ದೇಶವನ್ನ ಆಳ್ತಾಳೆ

ಈ ಹಿಂದೆ 35 ವರ್ಷಗಳ ದಿನಮಾನಗಳಲ್ಲಿ ಸ್ತ್ರೀ‌ ದೇಶವನ್ನ ಆಡಳಿತ ಮಾಡಿರುತ್ತಾಳೆ. ಅದೇ ರೀತಿ ಶಿವನ ಅನುಗ್ರಹದಿಂದ ಶಿವರಾತ್ರಿ ಬಳಿಕ ಸ್ತ್ರೀ ದೇಶವನ್ನ ಆಡಳಿತ ಮಾಡ್ತಾಳೆ. ಮೋದಿ ಅವರು ಪ್ರಧಾನಿ ಆಗೋದೆ ಇಲ್ಲ ಅಂತ ಹೇಳ್ತಾ ಇಲ್ಲ. ಶಿವರಾತ್ರಿ ಒಳಗೆ ಚುನಾವಣೆ ನಡೆದರೆ ಮೋದಿಯವರಿಗೂ ಮತ್ತೆ ಪ್ರಧಾನಿಯಾಗುವ ಯೋಗ ಇದೆ. ಶಿವರಾತ್ರಿ ಬಳಿಕ ಚುನಾವಣೆಯಾದ್ರೆ ಸ್ತ್ರೀ ದೇಶವನ್ನ ಆಳ್ತಾಳೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

RELATED ARTICLES

Related Articles

TRENDING ARTICLES