Wednesday, January 22, 2025

ನನ್ನ ಅಭಿಪ್ರಾಯವನ್ನು ಹೈಕಮಾಂಡ್​ಗೆ ಹೇಳ್ತೀನಿ : ಸಚಿವ ತಿಮ್ಮಾಪೂರ್

ಬೆಂಗಳೂರು : ನನ್ನ ಅಭಿಪ್ರಾಯವನ್ನು ಹೈಕಮಾಂಡ್‌ ನಾಯಕರಿಗೆ ಹೇಳುತ್ತೇನೆ ಎಂದು ಸಚಿವ ಆರ್.ಬಿ ತಿಮ್ಮಾಪೂರ್ ಹೇಳಿದ್ದಾರೆ.

ಕಾಂಗ್ರೆಸ್​ ಸರ್ಕಾರದಲ್ಲಿ ದಲಿತರಿಗೆ ಪ್ರಾಶಸ್ತ್ಯವಿಲ್ಲ ಎಂಬ ಅಸಮಾಧಾನ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ದಲಿತರಿಗೆ ಕೊಟ್ಟಿದ್ದಾರಲ್ಲ. ಪಕ್ಷದ ನಿಲುವಿಗೆ ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಸುಧಾಮ್ ದಾಸ್ ವಿರುದ್ದ ಹೈಕಮಾಂಡ್‌ಗೆ ಪತ್ರ ಬರೆದ ವಿಚಾರವಾಗಿ ಮತನಾಡಿ, ಅದು ಪಕ್ಷದ ಆಂತರಿಕ ವಿಚಾರ. ಬೇಕು, ಬೇಡ, ಸಮುದಾಯ ಪ್ರಾಂತ್ಯ ಅದೆಲ್ಲವೂ ಚರ್ಚೆಯಾಗುತ್ತದೆ. ನಾನು ಅದನ್ನು ಮಾಧ್ಯಮದ ಮುಂದೆ ಹೇಳೊದಿಲ್ಲ. ನನ್ನ ಅಭಿಪ್ರಾಯವನ್ನು ಹೈಕಮಾಂಡ್‌ಗೆ ಹೇಳುತ್ತೇನೆ ಎಂದಿದ್ದಾರೆ.

ಮಾಧ್ಯಮದ ಮುಂದೆ ಮಾತಾಡಲ್ಲ

ನಾನು ಪಕ್ಷದ ಹಿರಿಯ ನಾಯಕರ ಜೊತೆ ಮಾತನಾಡುತ್ತೇನೆ. ನನ್ನ ಬೇಡಿಕೆಗಳನ್ನು ಪಕ್ಷದ ಹಿರಿಯ ನಾಯಕರ ಮುಂದೆ ಇಡುತ್ತೇನೆ. ಪಕ್ಷದ ಆಂತರಿಕ ವಿಚಾರವನ್ನು ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಪಕ್ಷ ಸಾಕಷ್ಟು ಚಿಂತಿಸಿ ನಿರ್ಧಾರ ಮಾಡಿರುತ್ತದೆ. ಯಾವ ಕಾರಣಕ್ಕೆ ಹೈಕಮಾಂಡ್ ನಿರ್ಧಾರ ಮಾಡಿದೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES