Wednesday, January 22, 2025

ಡಿಕೆಶಿ ಭವಿಷ್ಯದಲ್ಲಿ ಸಿಎಂ ಆಗೋ ಭಾಗ್ಯ ಇಲ್ಲ : ಯತ್ನಾಳ್ ಭವಿಷ್ಯ

ವಿಜಯಪುರ : ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ. 5 ವರ್ಷವಾಗಲಿ, 5 ತಿಂಗಳಾಗಲಿ‌ ಸಿದ್ದರಾಮಯ್ಯ ಅವ್ರೇ ಮುಖ್ಯಮಂತ್ರಿ ಆಗಿರ್ತಾರೆ. ಡಿಕೆಶಿ ಭವಿಷ್ಯದಲ್ಲಿ ಸಿಎಂ ಆಗೋ ಭಾಗ್ಯ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಸಿಎಂ ಹುದ್ದೆಯಲ್ಲಿ ಸುಮ್ಮನೆ ಕೂತಿದ್ದಾರಷ್ಟೇ. ಸಿದ್ದರಾಮಯ್ಯರದ್ದು ಏನು ನಡೆಯುತ್ತಿಲ್ಲ. ಎಲ್ಲ ಡಿಕೆಶಿಯದ್ದೇ ನಡೆಯುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯರಿಗೆ ನೋವಿದೆ. ಯಾವ ಕಾಲಕ್ಕೂ ಸಿದ್ದರಾಮಯ್ಯ ಡಿಕೆಶಿಗೆ ಸಿಎಂ ಹುದ್ದೆ ಬಿಟ್ಟು ಕೊಡಲ್ಲ ಎಂದು ಡಿಕೆಶಿಗೆ ಚಾಟಿ ಬೀಸಿದ್ದಾರೆ.

ಡಿಕೆಶಿ ರಾಜ್ಯದ ಸೂಪರ್ ಸಿಎಂ. ಸಿದ್ದರಾಮಯ್ಯರನ್ನ ಮುಗಿಸುವ ಎಲ್ಲ ಯೋಜನೆ ಮಾಡಿದ್ದಾರೆ. ದೆಹಲಿಯಲ್ಲಿ ಡಿಕೆಶಿ ಯಾರ ಯಾರ ಮನೆಗೆ ಅಡ್ಡಾಡಿದ್ದಾರೆ ನನಗೆ ಗೊತ್ತಿದೆ. ದೆಹಲಿಯಲ್ಲಿ ಡಿಕೆಶಿ ಯಾರ್ಯಾರ ಮನೆಗೆ ಅಡ್ಡಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ ನನಗೆ ಗೊತ್ತಿದೆ. ಸೂಕ್ತ ಸಂದರ್ಭದಲ್ಲಿ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

30-40 ಸೀಟ್ ಮಾಡಿಕೊಳ್ಳೋದು ಡಿಕೆಶಿ ಪ್ಲಾನ್

ಸಿದ್ದರಾಮಯ್ಯರನ್ನ ಇಳಿಸೋಕೆ ಡಿಕೆಶಿ ಏನೇನು ಪ್ಲಾನ್ ಮಾಡಿದ್ದಾರೆ ನನಗೆ ಗೊತ್ತಿದೆ. ಸಿದ್ದರಾಮಯ್ಯ ವೀಕ್ ಆಗಿದ್ದಾರೆ, ಅವರನ್ನ ಡಿಕೆಶಿ ವೀಕ್ ಮಾಡಿದ್ದಾರೆ. ಸಿಎಂ ಮಾತ್ರ ಎಲ್ಲ ಇಲಾಖೆಗಳ ಸಭೆ ತೆಗೆದುಕೊಳ್ಳಬಹುದು, ಡಿಸಿಎಂಗೆ ಆ ಅಧಿಕಾರ ಇಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗೆ ಶಾಸಕ ಹೆಚ್ಚಿನ ಬೆಂಬಲ ಇದೆ, ಡಿಕೆಶಿ ಬೆನ್ನಿಗೆ 15 ಶಾಸಕರಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯ ಶಕ್ತಿ ಕಡಿಮೆ ಮಾಡಲು ಡಿಕೆಶಿ ಪ್ಲಾನ್ ಹಾಕಿದ್ದಾರೆ. ಇದೆ ಕಾರಣಕ್ಕೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ವಾಪಸ್ ಬರ್ತಾರೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಇರೋರನ್ನ ತೆಗೆದುಕೊಂಡು 30ರಿಂದ 40 ಸೀಟ್ ಮಾಡಿಕೊಳ್ಳೋದು ಡಿಕೆಶಿ ಪ್ಲಾನ್ ಆಗಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES