ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ರೀಲ್ ತಯಾರಕರ ಸ್ವರ್ಗವಾಗಿದೆ. ರೈಲಿನೊಳಗಿನಿಂದ ಪ್ರತಿದಿನ ವಿಚಿತ್ರ ಕೃತ್ಯಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಡಿಎಂಆರ್‌ಸಿ ಹಲವಾರು ಬಾರಿ ಸಲಹೆಯನ್ನು ನೀಡಿದ್ದು, ಇದೀಗ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಲಾಗಿದೆ.
ಡಿಎಂಆರ್‌ಸಿ ಮೆಟ್ರೋ ರೈಲುಗಳಲ್ಲಿ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ನೃತ್ಯ ಮಾಡುವವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯಾಗಿ ಸಲಹೆ ನೀಡಿದೆ. ಪ್ರಸಿದ್ಧ ಮೀಮ್ಸ್ ಜತೆಗೆ ರೈಲಿನಲ್ಲಿ ನೃತ್ಯ ಮಾಡದಂತೆ ಮೆಟ್ರೋ ಸಲಹೆ ನೀಡಿದೆ.
ಡಿಎಂಆರ್‌ಸಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ಮೀಮ್ಸ್ನಲ್ಲಿ ಅವೆಂಜರ್ಸ್ ಚಿತ್ರದ ದೃಶ್ಯ ತೋರಿಸಲಾಗಿದೆ. ದೆಹಲಿ ಮೆಟ್ರೋದೊಳಗಿನ ಹಲವಾರು ವೀಡಿಯೊಗಳು ವಿವಾದಕ್ಕೆ ಕಾರಣವಾದ ನಂತರ ಮೆಟ್ರೋ ರೈಲುಗಳಲ್ಲಿ ರೀಲ್‌ಗಳನ್ನು ಮಾಡದಂತೆ ಪ್ರಯಾಣಿಕರಿಗೆ ಡಿಎಂಆರ್‌ಸಿ ಕೋರಿದೆ. ಜತೆಗೆ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಎಚ್ಚರಿಸಿದೆ.