Wednesday, January 22, 2025

ಪತಿ ಕಣ್ಣ ಮುಂದೆಯೇ ಪತ್ನಿ ಉಸಿರು ಕಸಿದ ಕಿಲ್ಲರ್ ಬಸ್!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಪತಿಯ ಮುಂದೆಯೇ ಪತ್ನಿ ಮೇಲೆ ಬಸ್ ಹರಿದಿದೆ.

ನಗರದ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ಹಲವು ತಿಂಗಳಿನಿಂದ ರಸ್ತೆ ಕಾಮಗಾರಿ ನಿಂತುಹೋಗಿದೆ. ಸ್ಟೇಟ್ ಹೈವೇ ಆಗಿರುವುದರಿಂದ ಹೆಚ್ಚು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಕಾಮಗಾರಿ ನಿಂತಿದ್ದು, ರಸ್ತೆ ಗುಂಡಿಗಳಿಂದ ಕೂಡಿದೆ.

ಪತಿ ಶರಣಪ್ಪ ಜೊತೆ 58 ವರ್ಷದ ಸುಮಂಗಲ ಸ್ಕೂಟರ್​ನಲ್ಲಿ ತೆರಳುವಾಗ ರಸ್ತೆಯಲ್ಲಿದ್ದ ಕಲ್ಲು ಟಯರ್​ಗೆ ಸಿಲುಕಿ ಸ್ಕಿಡ್ ಆಗಿದೆ. ಪರಿಣಾಮ ಪತಿ, ಪತ್ನಿ ಇಬ್ಬರು ಕೆಳಗೆ ಬಿದ್ದಿದ್ದಾರೆ‌. ಈ ವೇಳೆ ಹಿಂದೆ ಬರುತ್ತಿದ್ದ ಖಾಸಗಿ ಸ್ಕೂಲ್ ಬಸ್ ಸುಮಂಗಲ ತಲೆ ಮೇಲೆ ಹರಿದಿದೆ. ಪರಿಣಾಮ ಸುಮಂಗಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಜರುಗುತ್ತಿದ್ದಂತೆ ಶಾಲೆಯ ಬಸ್ ಚಾಲಕ ಪರಾರಿಯಾಗಿದ್ದಾನೆ.

ಬೈಕ್ ಸವಾರನ ಮೇಲೆ ಹರಿದ BMTC

ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೆಳಗೆಬಿದ್ದ ಸವಾರನ ಮೇಲೆ ಬಿಎಂಟಿಸಿ ಬಸ್​ ಹರಿದಿರುವಂತಹ ಘಟನೆ ​ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ನಡೆದಿದೆ. ಮೃತ ಬೈಕ್​ ಸವಾರನ ಗುರುತು ಪತ್ತೆ ಆಗಿಲ್ಲ. ಘಟನೆ ನಂತರ ಬಿಎಂಟಿಸಿ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೀಣ್ಯ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES