Monday, December 23, 2024

ಅನುಮಾನಾಸ್ಪದ ರೀತಿಯಲ್ಲಿ ಕಾರ್ಮಿಕ ಸಾವು

ವಿಜಯಪುರ : ನಿರ್ಮಾಣ ಹಂತದ ಮನೆಯಲ್ಲಿ ಕಾರ್ಮಿಕನೊಬ್ಬನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ‌ ತಾಲೂಕಿ‌ನ ಹಡಲಗೇರಿ ರಸ್ತೆ ಪಕ್ಕದ ಪದ್ಮಾವತಿ ಗುಡ್ಡದ ಬಳಿ ಘಟನೆ ನಡೆದಿದೆ. ಅಮ್ಜದ್ ಹಾಜಿಸಾಬ ವಾಲಿಕಾರ (52) ಮೃತ ವ್ಯಕ್ತಿ.

ನಿರ್ಮಾಣ ಹಂತದಲ್ಲಿರುವ ಕೊಳಚೆ ಅಭಿವೃದ್ದಿ ಮಂಡಳಿಯ ಮನೆಯೊಂದರಲ್ಲಿ ಕಾರ್ಮಿಕನೊಬ್ಬ ಶವವಾಗಿ ಪತ್ತೆ ಆಗಿದೆ. ಮೃತ ವ್ಯಕ್ತಿ ಮನೆಗಳ ನಿರ್ಮಾಣ ಕಾಮಗಾರಿಯ ಸೆಂಟ್ರಿಂಗ್ ಮೇಸ್ತ್ರಿ ಎನ್ನಲಾಗಿದೆ. ಮೃತನ ಬೆನ್ನು ಸೇರಿ ದೇಹದ ಹಿಂಭಾಗ ರಕ್ತದ ಮಡುಗಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ.

ದೇಹ ಆರಾಮಾಗಿ ಮಲಗಿದ ಮಾದರಿಯಲ್ಲಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತನ ಜೊತೆಗೆ ಅದೇ ಕೋಣೆಯಲ್ಲಿ ಮಲಗಿದ್ದ ಮೂವರು ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES