Sunday, November 3, 2024

ಸೌಜನ್ಯ ಪ್ರಕರಣ ಮುಚ್ಚಿ ಹಾಕುವ ಕೆಲಸ ಆಗ್ತಿದೆ : ಮುತಾಲಿಕ್

ಹುಬ್ಬಳ್ಳಿ : ಸೌಜನ್ಯ ಪ್ರಕರಣದಲ್ಲಿ ಸಹ ಕಾಣೆಯಾಗಿ ಶವ ಸಿಗುತ್ತೆ. ಇದು ಬಹಳ ದೊಡ್ಡ ಪ್ರಕರಣ. ನಿರ್ಭಯಾ ಪ್ರಕರಣದಂತೆ ಸೌಜನ್ಯ ಪ್ರಕರಣ. ಇದನ್ನು ಮುಚ್ಚಿ ಹಾಕುವ ಕೆಲಸ ಆಗ್ತಿದೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ದೂರಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆಲ್ಲ ಸರ್ಕಾರ ನಿರ್ಲಕ್ಷ್ಯ, ಕಾನೂನಿನ ಸಡಿಲಿಕೆ ಕಾರಣ. ಬೆಳತಂಗಡಿ ಒಂದೇ ತಾಲೂಕಿನಲ್ಲಿ ಅಂಕಿ ಸಂಖ್ಯೆ ನೋಡಿದ್ರೆ ಭಯ ಆಗತ್ತೆ. ಇದರಲ್ಲಿ 452 ಆತ್ಮಹತ್ಯೆ ಪ್ರಕರಣ ದಾಖಲಾಗಿವೆ ಎಂದು ಹೇಳಿದ್ದಾರೆ.

ಸೌಜನ್ಯ ಮಾದರಿಯಲ್ಲಿ 2010ರಲ್ಲಿ ಮುರುಡೇಶ್ವರದಲ್ಲಿ ಯಮುನಾ ನಾಯಕ್ ಎಂಬ ಯುವತಿ ಕೊಲೆಯಾಗಿತ್ತು. ಮುಸ್ಲಿಂ ಮನೆಗೆ ಕೆಲಸಕ್ಕೆ ಹೋಗೋ ಹುಡುಗಿಯನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ಕುರುಹು ಇಲ್ಲ ಅಂತ ಆರೋಪಿ ನಿರ್ದೋಶಿ ಆಗ್ತಾನೆ ಎಂದು ತಿಳಿಸಿದ್ದಾರೆ.

ಲವ್ ಜಿಹಾದ್ ಪ್ರಕರಣಳೇ ಹೆಚ್ಚು

ಕರ್ನಾಟಕದಲ್ಲಿ 40 ಸಾವಿರ ಮಹಿಳೆಯರು ಕಾಣೆಯಾಗಿದ್ದು, 45 ಸಾವಿರ ಅಪ್ರಾಪ್ತ ಮಕ್ಕಳು ಗರ್ಭಿಣಿಯಾಗಿರೋದು ವರದಿಯಾಗಿದೆ. ಇದು ಭಯಾನಕ, ಆಘಾತಕರಿ ಅಂಕಿ ಸಂಖ್ಯೆ. ಕಳೆದ ಮೂರು ವರ್ಷದಲ್ಲಿ ದಾಖಲಾದ ಅಂಕಿ ಸಂಖ್ಯೆ ಇದು. ಇದರಲ್ಲಿ ಲವ್ ಜಿಹಾದ್ ಪ್ರಕರಣ ಸಂಖ್ಯೆಗಳೇ ಹೆಚ್ಚು ಎಂದು ಬೇಸರಿಸಿದ್ದಾರೆ.

ನಮ್ಮ ಸಂಘಟನೆಗೆ ಪ್ರತಿನಿತ್ಯ ನಾಲ್ಕೈದು ಕಾಲ್ ಬರುತ್ತದೆ. ಮಕ್ಕಳನ್ನು ಕಿಡ್ನ್ಯಾಪ್ ಮಾಡಿದ್ದಾರೆಂದು ಕಾಲ್ ಬರತ್ತೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದಕ್ಕಾಗಿ ಪ್ರತ್ಯೇಕ ಮಹಿಳಾ ಪಡೆ ರಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES