ಬೆಳಗಾವಿ : ಶ್ರಾವಣ ಮಾಸದ ಅಂಗವಾಗಿ ಯಲ್ಲಮ್ಮನ ಗುಡ್ಡಕ್ಕೆ ಇಂದು ಮುಂಜಾನೆಯಿಂದಲೇ ಭಕ್ತ ಸಾಗರ ಹರಿದು ಬರುತ್ತಿದೆ.
ಶ್ರಾವಣ ಮಾಸದ ಅಂಗವಾಗಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಮನೆ ಮಾಡಿದ ಸಂಭ್ರಮ. ಪ್ರತಿದಿನಿ ಎರಡು ಸಲ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗುತ್ತಿದೆ. ಈ ಹಿನ್ನೆಲೆ ದೇಶದ ನಾನಾ ಭಾಗಗಳಿಂದ ಯಲ್ಲಮ್ಮನ ಸಾನ್ನಿಧ್ಯಕ್ಕೆ ಭಕ್ತರ ದಂಡೆ ಬರುತ್ತಿದೆ.
ಇದನ್ನು ಓದಿ : ಡಿ.ಕೆ.ಶಿ ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ?:ಹೆಚ್ಡಿಕೆ ಕಿಡಿ
ಆಗಸ್ಟ್ 17 ರಿಂದ 14 ರವರೆಗೂ ಶ್ರಾವಣ ಮಾಸ ಹಿನ್ನೆಲೆ ಪ್ರತಿದಿನ ರಾತ್ರಿ 2 ಗಂಟೆಗೆ ವಿಶೇಷ ಪೂಜೆ ನರವೇರಲಿದ್ದು, 4 ಗಂಟೆಯಿಂದ ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೆ ಒಂದು ತಿಂಗಳ ಕಾಲ ದೇವಸ್ಥಾನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ಕೂಡ ನೀಡಲಾಗಿದೆ.
ಇದರಿಂದ ಯಲ್ಲಮ್ಮ ದೇವಿಯ ದರ್ಶನ ಪಡೆಯಲು ಸಾಲಾಗಿ ನಿಂತಿರುವ ಭಕ್ತರು.