Monday, December 23, 2024

ಸೌಜನ್ಯ ಗೃಹಲಕ್ಷ್ಮೀ ಅಲ್ವಾ? : ಮುತಾಲಿಕ್ ಕಿಡಿ

ಹುಬ್ಬಳ್ಳಿ : ಗೃಹಲಕ್ಷ್ಮೀ ಅಂತಾ ಯೋಜನೆ ತರ್ತೀರಾ, ಸೌಜನ್ಯ ಗೃಹಲಕ್ಷ್ಮೀ ಅಲ್ವಾ? ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಮನೆ ಹೆಣ್ಣುಮಕ್ಕಳ ಮೇಲೆ ಏನಾದರೂ ಸುಮ್ಮನೆ ಇರ್ತಿರಾ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜಕಾರಣಿಗಳು, ಪೊಲೀಸರು ಪಾಪಿಷ್ಠರು. ಈ ಎಲ್ಲ ವ್ಯವಸ್ಥೆಗೆ ಪೊಲೀಸರು ಹಾಗೂ ಸರ್ಕಾರವೇ ಕಾರಣ. ಬಿಜೆಪಿ, ಕಾಂಗ್ರೆಸ್ ಇರಲಿ, ಯಾರೇ ಇರಲಿ ಪಾಪಿಷ್ಠರು. ಬೆಳ್ತಂಗಡಿ ಅಲ್ಲಿ ನಡೆದ ಘಟನೆಗಳ ಬಗ್ಗೆ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು.]ಸೌಜನ್ಯ ಪ್ರಕರಣ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಸಗಣಿ ತಿನ್ನೋ ಪೊಲೀಸರು

ಸೌಜನ್ಯದು ಕೂಡಾ ಅತ್ಯಾಚಾರ ಮತ್ತು ಕೊಲೆ ಆಗುತ್ತೆ. ಅಮಾಯಕ ವ್ಯಕ್ತಿ ಸಂತೋಷ್​ನನ್ನು ಅರೆಸ್ಟ್ ಮಾಡ್ತಾರೆ. ನಂತರ ಬಿಡುಗಡೆ ಮಾಡ್ತಾರೆ. ಸಂತೋಷ್ ಬಂಧನಕ್ಕೆ ಯಾವದೇ ಸಾಕ್ಷಿ ಇಲ್ಲ ಅಂತ ಬಿಡುಗಡೆ ಮಾಡ್ತಾರೆ. ಇದುವರೆಗೂ ಯಾವದೇ ತನಿಖೆಯಾಗಿಲ್ಲ. ನಿರ್ಲಜ್ಜ ಪೊಲೀಸ್ ವ್ಯವಸ್ಥೆಗೆ ಇದು ಕಾರಣ ಎಂದು ಗುಡುಗಿದ್ದಾರೆ.

ವೆಂಕಟೇಶ, ಸಂತೋಷ್ ಪೊಲೀಸರ ಬ್ರಷ್ಟಾಚಾರಕ್ಕೆ ಬಲಿಯಾಗಿದ್ದಾರೆ. ಸಗಣಿ ತಿನ್ನೋ ಪೊಲೀಸರು ಎಷ್ಟು ಜನ ಬಲಿ ಕೊಟ್ಟಿದ್ದಾರೆ. 40 ಸಾವಿರ ಹೆಣ್ಣು ಮಕ್ಕಳ ಕಾಣೆಯಾಗಿರೋದಕ್ಕೆ ಪೊಲೀಸರೇ ಕಾರಣ ಎಂದು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES