Sunday, November 24, 2024

ಪವರ್ ಟಿವಿಯಲ್ಲಿ ಕಮಿಷನ್ ‘ಕರಾಳ’ಲೋಕ ಅನಾವರಣ

ಬೆಂಗಳೂರು : ಪವರ್ ಟಿವಿ ರಹಸ್ಯ ಕಾರ್ಯಚರಣೆಗಳ ಮೂಲಕ ಅದೆಷ್ಟೋ ಅಕ್ರಮ, ಹಗರಣ, ಭ್ರಷ್ಟ ಅಧಿಕಾರಿಗಳ ನೈಜ ಮುಖವಾಡವನ್ನು ಬಯಲು ಮಾಡಿದೆ.

ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದ್ದ ಗುತ್ತಿಗೆದಾರರ ಕಮಿಷನ್‌ ಪ್ರಕರಣದ ಕರಾಳ ಮುಖವನ್ನು ಇಂದು ಅನಾವರಣ ಮಾಡಿದೆ.

40 ಪರ್ಸೆಂಟ್‌ ಕಮಿಷನ್‌ ಆರೋಪ ಬಿಜೆಪಿ ಸರ್ಕಾರ ತಲೆತಗ್ಗಿಸುವಂತೆ ಮಾಡಿತ್ತು. ಗಂಭೀರ ಆರೋಪದಿಂದ ಅಧಿಕಾರ ಕಳೆದುಕೊಂಡಿತ್ತು. ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಸರ್ಕಾರ ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಆದರೆ, ಈ ಆರೋಪ ಮಾಡಿದ್ದ ಕಾಂಗ್ರೆಸ್ ಆಗಲಿ, ಮೋದಿಗೆ ಪತ್ರ ಬರೆದಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿರುವ ಕೆಂಪಣ್ಣನವರಾಗಲಿ ಒಂದೇ ಒಂದು ಸಾಕ್ಷಿಯನ್ನ ರಾಜ್ಯದ ಜನತೆ ಮುಂದಿಡಲಿಲ್ಲ.

ಇಂದು ಪವರ್ ಟಿವಿಯಲ್ಲಿ ಗುತ್ತಿಗೆದಾರರು ಕೊಡಬೇಕಿರೋದು 40% ಕಮಿಷನ್‌ ಅಲ್ಲ. ಅಸಲಿಗೆ 54% ಕಮಿಷನ್ ಕೊಡಬೇಕು ಅನ್ನೋ ಕರಾಳ ಮುಖವನ್ನು ದಾಖಲೆಗಳ ಸಮೇತ ಬಯಲು ಮಾಡಿದೆ.

ಯಾವ ಪಕ್ಷದವರೇ ಇರಲಿ ತನಿಖೆಯಾಗ್ಬೇಕು

40 ಪರ್ಸೆಂಟ್​​​ ಕಮಿಷನ್ ವರದಿಯನ್ನು ನಿಮ್ಮ ಪವರ್​​​ ಟಿವಿ ಪ್ರಸಾರ ಮಾಡಿರುವುದರ ಕುರಿತು ಗೃಹ ಸಚಿವ ಡಾ.ಜಿ‌. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ದೂರು ಕೊಟ್ಟಿದ್ರೆ ತನಿಖೆ ಆಗುತ್ತೆ ಎಂದು ಹೇಳಿದ್ದಾರೆ.

ಇನ್ನು ಈ ವಿಚಾರವಾಗಿ ಸಚಿವ ಬಿ.ನಾಗೇಂದ್ರ ಪ್ರತಿಕ್ರಿಯಿಸಿದ್ದು, ಹಿಂದೆ ಇದ್ದ ಬಿಜೆಪಿ ಸರ್ಕಾರ 40 ಪರ್ಸೆಂಟ್​​ ಅನ್ನೋದಕ್ಕೆ ಇದು ನಿದರ್ಶನವಾಗಿದೆ ಎಂದಿದ್ದಾರೆ. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ಈ ಬಗ್ಗೆ ತನಿಖೆಯಾಗಲಿ, ಯಾವ ಪಕ್ಷದವರೇ ಇರಲಿ ತನಿಖೆಯಾಗ್ಬೇಕು ಎಂದು ಆಗ್ರಹಿಸಿದರು.

RELATED ARTICLES

Related Articles

TRENDING ARTICLES