ಬೆಂಗಳೂರು : ಕಂಟ್ರಾಕ್ಟ್ ಕಮೀಷನ್ ಬಗ್ಗೆ ಪವರ್ ಟಿವಿ ವರದಿ ಪ್ರಸಾರ ವಿಚಾರ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಕಾಲದಲ್ಲಿ ಅನೇಕ ಹಗರಣ ಆಗಿದೆ. ಅದನ್ನು ತನಿಖೆಗೆ ನೀಡಿದ್ರೆ ಬಿಜೆಪಿಯವರೇ ಸಿಕ್ಕಿಬೀಳ್ತಾರೆ ಎಂದು ಕುಟುಕಿದ್ದಾರೆ.
ಪ್ರತಿಯೊಂದು ಹಗರಣ (ಸ್ಕ್ಯಾಮ್) ತನಿಖೆಗೆ ಕೊಟ್ರೆ ಅವರೇ ಸಿಕ್ಕಿ ಬೀಳ್ತಾರೆ. ಐಪಿಎಸ್, ಗಂಗಾ ಕಲ್ಯಾಣ, ಬಿಟ್ ಕಾಯಿನ್ ತನಿಖೆ ನಡೆಸುತ್ತೇವೆ ಅಂತ ಹೇಳಿದೆವು. ಇದನ್ನ ಹೇಳಿದ್ರೆ ದ್ವೇಷದ ರಾಜಕಾರಣ ಅಂತಾರೆ. ತನಿಖೆಗೆ ಕೊಟ್ರೆ ಎಲ್ಲವೂ ಹೊರಗೆ ಬರಲಿದೆ. ಮಾಗಡಿ ರಸ್ತೆ ಅಷ್ಟೇ ಅಲ್ಲ, ಬೇರೆ ಕಡೆಯೂ ಕೂಡ ದೂರುಗಳು ಕೇಳಿಬಂದಿವೆ ಎಂದು ಹೇಳಿದ್ದಾರೆ.
ಖಾಲಿ ಹುದ್ದೆ ಕೂಡಲೇ ಭರ್ತಿ
ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಹಿಂದಿನ ಸರ್ಕಾರ ನಿರ್ಲಕ್ಷ್ಯ ತೋರಿದೆ. ಮುಂಬಡ್ತಿ ನೀಡುವ ಬಗ್ಗೆ ನಿರ್ಧಾರ ಕೈಗೊಂಡು, ಖಾಲಿ ಇರುವ ಹುದ್ದೆ ಕೂಡಲೇ ತುಂಬುವಂತೆ ಸೂಚಿಸಿದ್ದೇವೆ. ಕೆಲ ಲೋಪದೋಷಗಳು ಆಗಿವೆ.15 ದಿನಗಳಲ್ಲಿ ಲೋಪದೋಷಗಳು ಸರಿ ಆಗಬೇಕು. ಕಾನೂನು ಮೀರಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಕೆಲಸ ಮಾಡ್ತೀವಿ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಲೋಪದೋಷಗಳು ಆಗಿವೆ. ಹೆಚ್ಚಿನ ತನಿಖೆ ಈಗಾಗಲೇ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.