Friday, November 22, 2024

ತಮಿಳುನಾಡಿಗೆ ನೀರು ಹರಿಸುವುದು ರೈತದ್ರೋಹಿ ಕಾರ್ಯ : ಕುರಬೂರು ಶಾಂತಕುಮಾರ್

ಬೆಂಗಳೂರು : ಮುಖ್ಯಮಂತ್ರಿಗಳು ಒಂದು ರೀತಿ ಹೇಳಿಕೆ ಕೊಡುವುದು, ನೀರಾವರಿ ಸಚಿವರು ಮತ್ತೊಂದು ರೀತಿ ನಡೆದುಕೊಳ್ಳುವುದು ನಾಟಕೀಯ ವರ್ತನೆ ಎಂದು ರಾಜ್ಯ ರೈತ ಸಂಘಟನೆಗಳ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನದಿ ಮೂಲಕ ತಮಿಳುನಾಡಿಗೆ ನೀರು ಹರಿಸುವುದು ರೈತದ್ರೋಹಿ ಕಾರ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ. ಕಾವೇರಿ ಎಲ್ಲಾ ನಾಲೆಗಳಿಗೂ ಬೆಳೆ ಬೆಳೆಯಲು ನೀರು ಹರಿಸುವ ನಿರ್ಧಾರ ಕೈಗೊಳ್ಳಿ. ಇಲ್ಲದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಕಾವೇರಿ ಅಚ್ಚು ಕಟ್ಟು ಭಾಗದ ರೈತರು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಕಾವೇರಿ ನೀರು ವಿವಾದ: ಹೆಚ್​ಡಿಕೆ ವಿರುದ್ದ ಸಚಿವ ಚಲುವರಾಯ ಸ್ವಾಮಿ ಕಿಡಿ!

ನಾಟಕೀಯವಾಗಿ ವರ್ತಿಸಬಾರದು

ನಮ್ಮ ರೈತರ ಬಲಿಕೊಟ್ಟು ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ. ಕೂಡಲೇ ಕಾವೇರಿ ಅಚ್ಚುಕಟ್ಟು  ಭಾಗದ ನಾಲೆಗಳಿಗೆ ಬೆಳೆ ಬೆಳೆಯಲು ನೀರು ಹರಿಸಬೇಕು. ಸರ್ಕಾರ ನಾಟಕೀಯವಾಗಿ ವರ್ತಿಸದೆ ರಾಜ್ಯದ ರೈತರ ಹಿತ ಕಾಪಾಡಬೇಕು. ಮಳೆ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಕಾವೇರಿ ಪ್ರಾಧಿಕಾರಕ್ಕೆ ಮನವಿ ಮಾಡಿ ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES