ಬೆಳಗಾವಿ : ಕಳೆದ ಆರು ತಿಂಗಳಿನಿಂದ ಯಾವುದೇ ಕಾಮಗಾರಿಗಳಿಗೂ ಚಾಲನೆ ನೀಡದೇ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ಧೋರಣೆ ಖಂಡಿಸಿ ಹೆಸ್ಕಾಮ್ ಗುತ್ತಿಗೆದಾರರು ಇಂದು ಕೆಇಬಿ ಎದುರು ಧಿಡೀರ್ ಪ್ರತಿಭಟನೆ ನಡೆಸಿದರು.
ಹೆಸ್ಕಾಮ್ ಎಮ್.ಡಿ ಮಹ್ಮದ್ ರೋಷಣ ಎದುರು ಅಧಿಕಾರಿಗಳು ಮಾಹಿತಿ ಮುಚ್ಚಿ ಇಟ್ಟಿರುವ ಗಂಬೀರ ಆರೋಪ ವನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಹೆಸ್ಕಾಂ ಗುತ್ತಿಗೆದಾರರಿಂದ ನಡೆಸಿದರು.
ಇದನ್ನೂ ಓದಿ :ಬಿಬಿಎಂಪಿ 243 ವಾರ್ಡ್ಗಳಿಂದ 225 ಕ್ಕೆ ಇಳಿಸಿ ವರದಿ ಸಲ್ಲಿಕೆ: ಸಚಿವ ರಾಮಲಿಂಗಾರೆಡ್ಡಿ!
ಈ ಕುರಿತು ಗುತ್ತಿಗೆದಾರ ಸಂಘದ ಅಧ್ಯಕ್ಷ ಜಗದೀಶ ಅವಟಿ ಮಾದ್ಯಮ ಪ್ರತಿಕ್ರಿಯೆ ನೀಡಿ, ಲೈಟಿಂಗ್ ಶೀಘ್ರ ಸಂಪರ್ಕ, ಟೆಂಪರರಿ ಕನೆಕ್ಷನ್, ಕಮರ್ಷಿಯಲ್ ಕನೆಕ್ಷನ್ , ಸರಿಯಾದ ಬಿಲ್ ರವಾನೆ ಕೊರತೆ ಸೇರಿದಂತೆ ಎಲ್ಲಾ ಕಡತಗಳನ್ನು ಅಧಿಕಾರಿಗಳು ತಮ್ಮ ಕಚೇರಿಯಲ್ಲಿರಿಸಿಕೊಂಡು ಫೈಲ್ಗಳಿಗೆ ಚಾಲನೆ ನೀಡದೇ ಕಂಪನಿಗೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹಲವು ಬಾರಿ ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದರು.