Saturday, November 23, 2024

ಹೊಸ ಪ್ರೊಡಕ್ಷನ್ ಹೌಸ್ ಸ್ಟಾರ್ಟ್ ಮಾಡಿದ ಸ್ಟಾರ್ ಜೋಡಿ

ಬೆಂಗಳೂರು : ಮದುವೆಗೂ ಮುನ್ನವೇ ಸ್ಯಾಂಡಲ್​ವುಡ್​ ಸ್ಟಾರ್ ಜೋಡಿ ಖುಷಿ ಸುದ್ದಿ ನೀಡಿದೆ.

ಬಹು ಕಾಲದಿಂದ ಪ್ರೀತಿಸುತ್ತಿದ್ದ ನಟಿ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಮದುವೆಗೆ ಈಗಾಗಲೇ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದೇ 23 ಹಾಗೂ 24ರಂದು ಈ ಜೋಡಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಈ ಮಧ್ಯಯೇ ಈ ಜೋಡಿ ಮತ್ತೊಂಡು ಸಿಹಿ ಸುದ್ದಿ ನೀಡಿದೆ. ನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ಅದರ ಜೊತೆಗೆ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ. ಭುವನಂ ಎಂಟಟೈನ್ ಮೆಂಟ್ ಎಂದು ಹೆಸರಿಡಲಾಗಿದ್ದು ಅದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ‘ಭುವನಂ ಶ್ರೇಷ್ಠಮ್ ಗಚ್ಚಾಮಿ’ ಎಂದು ಹೆಸರಿಡಲಾಗಿದೆ.

ರೆಟ್ರೊ ಶೈಲಿಯಲ್ಲೂ ಭುವನ್

ಇದೊಂದು ಬಾಕ್ಸರ್ ನ ಕಥೆಯಾಗಿದ್ದು, 6 ವರ್ಷದ ಹಿಂದೆಗೆ ಈ ರೀತಿಯ ಸಿನಿಮಾ ಒಂದನ್ನ ಮಾಡಬೇಕು ಅಂತ ಭುವನ್ ಹಾಗೂ ಹರ್ಷಿಕಾ ಪ್ಲಾನ್ ರೂಪಿಸಿದ್ದರಂತೆ. ಸ್ವತಃ ಭುವನ್ ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು. ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್​ ಮೇಲೆ ಕೆಲಸ ಮಾಡಿದ್ದಾರೆ.

ಕೊಡಗು ಮೂಲದ ನಾಯಕಿ ಆಯ್ಕೆ?

ಸದ್ಯ ಮದುವೆಯ ಸಂದರ್ಭದಲ್ಲಿ ಈ ಖುಷಿಯ ಸುದ್ದಿಯನ್ನು ಕೂಡ ಭುವನ್ ಹಾಗೂ ಹರ್ಷಿಕಾ ಮಾಧ್ಯಮ ಮಿತ್ರರ ಜೊತೆ ಹಂಚಿಕೊಂಡಿದ್ದಾರೆ. ಮದುವೆ ಬಳಿಕ ಸಿನಿಮಾ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಹರ್ಷಿಕಾ ನಿರ್ಮಾಪಕಿಯಾಗಿ ಮೊದಲ‌ ಬಾರಿಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES