ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ನಗರ ಇಂದು ಖಗೋಳ ವಿಸ್ಮಯದ ಶೂನ್ಯ ನೆರಳಿಗೆ ಸಾಕ್ಷಿಯಾಗಲಿದೆ.
ಕಳೆದ ಏಪ್ರಿಲ್ 25 ರಂದು ಗೋಚರವಾಗಿದ್ದ ಶೂನ್ಯ ನೆರಳು, ಇಂದು ಮತ್ತೆ ಗೋಚರವಾಗಲಿದೆ, ಯಾವಾಗಲೂ ಜೊತೆಗೇ ಇರೋ ನಿಮ್ಮ ನೆರಳು ಇಂದು ಮಾತ್ರ ನಿಮಗೆ ಕಾಣಿಸುವುದಿಲ್ಲ.
ಏನಿದು ಶೂನ್ಯ ನೆರಳಿನ ದಿನ? :
ಖಗೋಳ ವಿಸ್ಮಯದ ಶೂನ್ಯ ನೆರಳು ವರ್ಷಕ್ಕೆ ಎರಡು ಬಾರಿ ಕಾಣಿಸಿಕೊಳ್ಳುವುದು, ಸಾಮಾನ್ಯವಾಗಿ ಮನುಷ್ಯ ಮೇಲೆ ಸೂರ್ಯನ ನೆರಳು ಬಿದ್ದಾಗ ಆತನ ನೆರಳು ಎಲ್ಲರಿಗೂ ಗೋಚರವಾಗುತ್ತದೆ. ಅದೇ, ಶೂನ್ಯದಿನದಂದು ಸೂರ್ಯನು ಬೆಳಕು ಜನರ ಮೇಲೆ ಬಿದ್ದರೂ ಆತನ ನೆರಳು ಗೋಚರವಾಗುವುದಿಲ್ಲ ಶೂನ್ಯ ನೆರಳಿನ ದಿನ ನಿಮ್ಮ ನೆರಳು ಕಾಣುವುದಿಲ್ಲ
ಅಪರೂಪದ ಖಗೋಳ ವಿದ್ಯಮಾನದ ಅನುಭವ ಕಾಣ್ತುಂಬಿಕೊಳ್ಳಲು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯಲ್ಲಿ ಕಳೆದ ಬಾರಿ ಅವಕಾಶ ಮಾಡಿಕೊಡಲಾಗಿತ್ತು. ಈ ಅವಧಿಯಲ್ಲಿ ಸೂರ್ಯನ ಬಿಸಿಲು ನೇರವಾಗಿ ನಮ್ಮ ನೆತ್ತಿ ಮೇಲೆ ಬೀಳುತ್ತದೆ. ಆದರೆ ನಮ್ಮ ನೆರಳು ಭೂಮಿಗೆ ಬೀಳುವುದಿಲ್ಲ. ನಮಗೆ ಕಾಣಿಸುವುದಿಲ್ಲ ಈ ಸಮಯದಲ್ಲಿ ಉದ್ದವಾಗಿ ನಿಂತ ಯಾವುದೇ ವಸ್ತು, ವ್ಯಕ್ತಿಯ ನೆರಳು ಭೂಮಿಯ ಮೇಲೆ ಬೀಳೋದಿಲ್ಲ.