Wednesday, January 22, 2025

ಹೃದಯಘಾತದಿಂದ ಎಎಸ್ಐ ಸಾವು

ಹುಬ್ಬಳ್ಳಿ : ತೀವ್ರ ಹೃದಯಘಾತದಿಂದ ಎಎಸ್​ಐ ಒಬ್ಬರು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯ ಪೊಲೀಸ್ ವಸತಿ ಗೃಹದಲ್ಲಿ ನಡೆದಿದೆ.

ಎಎಸ್​ಐ ಚಂದ್ರು ಛಲವಾದಿ ಮೃತ ಪೊಲೀಸ್ ಅಧಿಕಾರಿ. ಇವರು ಗೋಕುಲ ಪೊಲೀಸ್ ಠಾಣೆಯಲ್ಲಿ ಎಎಸ್​ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಚಂದ್ರು ಛಲವಾದಿ ಅವರು ಮೂಲತಃ ಮುಳಗುಂದದವರು. 1994ನೇ ಬ್ಯಾಚಿನವರು. ಇವರಿಗೆ ಎರಡು ಮಕ್ಕಳು ಇದ್ದರು. ಇಂದು ವಸತಿ ಗೃಹದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಂಧದ ಮರ ಕಳ್ಳತನಕ್ಕೆ ಯತ್ನ

ಗಂಧದ ಮರ ಕಳ್ಳತನಕ್ಕೆ ಯತ್ನ ವಿಫಲವಾಗಿರುವ ಘಟನೆ ಮೈಸೂರಿನ ಹೃದಯ ಭಾಗದಲ್ಲಿ ನಡೆದಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆ ಉದ್ಯಾನವನದಲ್ಲಿ ಬೆಳ್ಳಂ ಬೆಳಗ್ಗೆ ಗಂಧದ ಮರ ಕದಿಯಲು ದುಷ್ಕರ್ಮಿಗಳು ಯತ್ನಿಸಿದ್ದರು.

ಈ ವೇಳೆ ವಾಯು ವಿಹಾರಿಗಳು ಕಳ್ಳರನ್ನ ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಕೈಯಲ್ಲಿದ್ದ ಮಚ್ಚು ಬೀಸಿ ಪರಾರಿಯಾಗಿದ್ದಾರೆ. ಘಟನೆ ಸ್ಥಳಕ್ಕೆ ಪೋಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES