Sunday, December 22, 2024

ನಟ ಯಶ್​ ಅವಕಾಶಕ್ಕಾಗಿ ನನ್ನ ಮುಂದೆ ಕಣ್ಣೀರಿಟ್ಟಿದ್ದ: ತಮಿಳು ನಟ ಆಕಾಶ್​ ವೀಡಿಯೋ ವೈರಲ್!

ಪ್ಯಾನ್​ ಇಂಡಿಯಾ ಸ್ಟಾರ್​ ನಟ ಯಶ್​ ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ಪಟ್ಟಂಥ ಕಷ್ಟ, ಅವಕಾಶವಿಲ್ಲದೇ ನೊಂದುಕೊಂಡು ಕಣ್ಣೀರು ಹಾಕಿದ ಪರಿಯನ್ನು ತಮಿಳು ನಟ ಜೈ ಆಕಾಶ್‌ ಅವರು ಹೇಳಿದ್ದು ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ವೀಡಿಯೋದಲ್ಲಿ ತಮಿಳು ನಟ ಜೈ ಆಕಾಶ್​ ಅವರು,  ಯಶ್​ ಕುರಿತ ಈ ಹೊಸ ವಿಚಾರವನ್ನು ಕೇಳಿ ಫ್ಯಾನ್ಸ್​ ತಮ್ಮ ನೆಚ್ಚಿನ ನಟನ ಹಿನ್ನೆಲೆ ಹೀಗಿತ್ತಾ ಎಂದು ಶಾಕ್ ಆಗುವಂತೆ ಮಾಡಿದ್ದಾರೆ. ಆರಂಭದ ದಿನಗಳಲ್ಲಿ ಯಶ್​ ಅವರಿಗೆ ಅವಕಾಶಗಳೇ  ಇರಲಿಲ್ಲ. ಈ ವೇಳೆ  ನಟ ಜೈ ಆಕಾಶ್‌  ಅವರನ್ನು ಭೇಟಿಯಾಗಿ ಅವರ ಮುಂದೆ ಕಣ್ಣೀರು ಸುರಿಸಿದ್ದರು. ಈ ವಿಷಯವನ್ನು ಜೈ ಆಕಾಶ್​ ಅವರೇ ಹೇಳಿಕೊಂಡಿದ್ದಾರೆ.

ಯಶ್​ ಕುರಿತು ಮಾತನಾಡಿದ ಅವರು, ನಿಮಗೆಲ್ಲರಿಗೂ ಈಗ ಕೆಜಿಎಫ್‌ ಸಿನಿಮಾದ ಯಶ್‌ ಗೊತ್ತು. ಆದರೆ, ಅವರ ಮೊದಲ ಸ್ಥಿತಿ ಬೇರೆಯದ್ದೇ ಆಗಿತ್ತು ಎಂದಿರುವ ಜೈ ಆಕಾಶ್​, ಯಶ್‌ ಮೊದಲಿಗೆ ಇಂಟ್ರಡ್ಯೂಸ್‌ ಆಗಿದ್ದು, ನಾನು ಹೀರೋ ಆಗಿ ನಟಿಸಿದ್ದ ಸಿನಿಮಾದಲ್ಲಿ. ನನ್ನ ತಮ್ಮನಾಗಿ ಯಶ್‌ ನಟಿಸಿದ್ದಾರೆ. ಆತನನ್ನು ನಾನೇ ಸೆಲೆಕ್ಟ್‌ ಮಾಡಿದ್ದೆ. ಆತನ ಮುಖ ನನ್ನ ಮುಖವನ್ನು ಹೋಲುತ್ತಿತ್ತು. ಅದಕ್ಕಾಗಿ ತಮ್ಮನ ಪಾತ್ರ ನೀಡಿದ್ದೆ ಎಂದಿದ್ದಾರೆ.

ಆ ದಿನಗಳಲ್ಲಿ ಯಶ್​ ಕಿರುತೆರೆಯಲ್ಲಿ ನಟಿಸುತ್ತಿದ್ದರು. ‘ಅಂದು ಯಶ್​, ಸದ್ಯಕ್ಕೆ ನನಗೆ ಸೀರಿಯಲ್‌ ಎಲ್ಲಾ ಬೇಡ. ಸಿನಿಮಾಗಳಲ್ಲಿ ನಟಿಸಬೇಕು. ಅವಕಾಶಗಳು ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದ. ಆಗ ನಾನೇ ಅವನನ್ನು ಕರೆದು  ಸಮಾಧಾನ ಪಡಿಸಿದ್ದೆ, ಊಟವನ್ನೂ ಮಾಡಿಸಿದ್ದೆ. ಜೊತೆಗೆ ನನ್ನ ಸಿನಿಮಾ ಜಂಬದ ಹುಡುಗಿದಲ್ಲಿ  ನಟಿಸುವ ಅವಕಾಶವನ್ನೂ ಕೊಟ್ಟೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES