Wednesday, January 22, 2025

ಸೈನ್ಯ ಸೇರುವ ಕನಸು ಕಾಣುತ್ತಿದ್ದ ಯುವಕ ನೇಣಿಗೆ ಶರಣು

ಬೆಳಗಾವಿ : ದೇಶ ಅಂದ್ರೆ ಪಂಚಪ್ರಾಣ.. ಸೈನಿಕರು ಅಂದ್ರೆ ಅಪಾರ ಗೌರವ.. ದೇಶ ಸೇವೆಗಾಗಿ ಪ್ರಾಣವನ್ನೇ ಅರ್ಪಿಸಲು ಪಣತೊಟ್ಟಿದ್ದ ಜೀವ ಅದು.. ಆ ಅಮೂಲ್ಯ ಜೀವ ವಿಧಿಯಾಟಕ್ಕೆ ಮಸಣ ಸೇರಿದೆ.

ಹೌದು, ಭಾರತೀಯ ಸೇನೆ ಸೇರಿ ದೇಶ ರಕ್ಷಣೆಗಾಗಿ ಶತ್ರುಗಳ ವಿರುದ್ಧ ಹೋರಾಟ ಮಾಡಬೇಕು ಎಂಬ ಮಹದಾಸೆ ಹೊಂದಿದ್ದ ಜೀವವೊಂದು ನೇಣಿಗೆ ಕೊರಳೊಡ್ಡಿದೆ.

ಸೈನ್ಯ ಸೇರ್ಪಡೆ ಕನಸು ಕಾಣುತ್ತಿದ್ದ ಯುವಕನೊಬ್ಬ ನೇಣಿಗೆ ಶರಣಾಗಿರು ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ. ಅಪ್ಪಾಸೋ ಶಿವಾಜಿ ಪಣದೆ (24) ಆತ್ಮಹತ್ಯೆ ಮಾಡಿಕೊಂಡ ಯುವಕ.

ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ. ಇಂದು ಆತುರದ ನಿರ್ಧಾರಕ್ಕೆ ಬಾರದೂರಿನತ್ತ ಪಯಣ ಬೆಳೆಸಿದ್ದಾರೆ. ಮೃತ ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ನಿಪ್ಪಾಣಿ ಗ್ರಾಮಾಂತರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES