Monday, December 23, 2024

ಆರ್​ಎಫ್ಒ ಮನೆಯಲ್ಲಿ 3 ಕೋಟಿ ಮೌಲ್ಯದ ಆಸ್ತಿ ದಾಖಲೆ ಪತ್ತೆ

ಬೆಂಗಳೂರು : ಲೋಕಾಯುಕ್ತ ಅಧಿಕಾರಿಗಳು ಆರ್‌ಎಫ್‌ಒ ಸತೀಶ್ ಮನೆ ಮೇಲೆ ದಾಳಿ ನಡೆಸಿದ್ದು, ಬರೋಬ್ಬರಿ 3 ಕೋಟಿ ಮೌಲ್ಯದ ಆಸ್ತಿ ದಾಖಲೆ ಪತ್ತೆಯಾಗಿದೆ.

ಚನ್ನಗಿರಿ, ಶಿವಮೊಗ್ಗ ನಗರದ ಸತೀಶ್​ ಅವರ ನಿವಾಸದಲ್ಲಿ ಪರಿಶೀಲನೆ ಮುಂದುವರಿದಿದೆ. ಸುಮಾರು 2ರಿಂದ 3 ಕೋಟಿ ರೂ. ಮೌಲ್ಯದ ಆಸ್ತಿ ದಾಖಲಾತಿಗಳು ಪತ್ತೆಯಾಗಿವೆ. ಹಣ, ಚಿನ್ನ ಪತ್ತೆಯಾಗಿಲ್ಲ. ಒಂದು ಮನೆ, 4 ಕಾರು, 2 ಬೈಕ್‌, ಚಿನ್ನ ಅಡವಿಟ್ಟ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸತೀಶ್ ಅವರು ಬಂಡೀಪುರ ಸೇರಿದಂತೆ ಹತ್ತಾರು ಕಡೆ ಸೇವೆ ಸಲ್ಲಿಸಿದ್ದರು. ಇವರ ವಿರುದ್ಧ ಇಲಾಖಾ ತನಿಖೆ ಕೇಸ್‌ಗಳು ಬಾಕಿ ಇರುವುದು ಪತ್ತೆಯಾಗಿದೆ. ಸತೀಶ್ ಬೆಳಗ್ಗೆಯಿಂದ ಶಿವಮೊಗ್ಗದ ಡಾಲರ್ಸ್‌ ಕಾಲೋನಿ ನಿವಾಸದಲ್ಲಿದ್ದರು. ಬಳಿಕ, ಎದೆ ನೋವು ಅಂತ ಆಸ್ಪತ್ರೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES