ಬೆಂಗಳೂರು : ಆಷಾಢ ಮುಗಿದು ಶ್ರಾವಣ ಬಂದೇ ಬಿಡ್ತು. ಈ ಮಾಸ ಹಲವು ಹಬ್ಬಗಳನ್ನು ಹೊತ್ತು ತಂದಿದೆ. ಅದರಲ್ಲೂ ವರಮಹಾಲಕ್ಷ್ಮೀ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಮಾರ್ಕೇಟ್ ಗೆ ರೆಡಿಮೆಡ್ ಲಕ್ಷ್ಮೀಯರು ಲಗ್ಗೆಯಿಟ್ಟಿದ್ದಾರೆ.
ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಇದೇ 25ರಂದು ನಾಡಿನೆಲ್ಲೆಡೆ ಹೆಣ್ಣು ಮಕ್ಕಳ ನೆಚ್ಚಿನ ಹಬ್ಬವನ್ನು ಆಚರಿಸಲಾಗುತ್ತಿದೆ. ವರಮಹಾಕ್ಷ್ಮೀ ಹಬ್ಬದಂದು ಜಗವ ಕಾಯೋ ಜಗ್ಮನಾತೆ ಲಕ್ಷ್ಮೀಯನ್ನು ಮನೆ-ಮನೆಗಳಲ್ಲಿ ಪ್ರತಿಷ್ಟಾಪಿಸಿ, ಅಲಂಕರಿಸಿ ಪೂಜಿಸತ್ತಾರೆ. ಅಷ್ಟ ಸೌಭಾಗ್ಯಗಳ ಒಡತಿಯ ಅಲಂಕಾರವನ್ನು ನೋಡೋದೇ ಚೆಂದ.
ಆದ್ರೆ, ಬೆಂಗಳೂರಿನ ಕೆಲ ಮಂದಿಗೆ ಮೊದಲಿನ ತರ ದೇವಿಯನ್ನು ಅಲಂಕಾರ ಮಾಡಲು ಸಮಯವಿಲ್ಲ. ಬ್ಯೂಸಿ ವರ್ಕ್ ಶೆಡ್ಯೂಲ್ ಗೆ ವಗ್ಗಿದ್ದಾರೆ. ಇಂತಹ ಬ್ಯೂಸಿ ಮಹಿಳೆಯರಿಗಾಗಿಯೇ ಬೆಂಗಳೂರು ಮಾರ್ಕೆಟ್ ಗೆ ರೆಡಿಮೆಡ್ ವರಮಹಾಲಕ್ಷ್ಮೀಯರು ಎಂಟ್ರಿಕೊಟ್ಟಿದ್ದಾರೆ.
500 ರಿಂದ 20 ಸಾವಿರ ರೂ.
ಹಬ್ಬದಂದು ಮನೆ ಕೆಲಸ,ಊಟ ಹಾಗೂ ಮಕ್ಕಳ ತಯಾರಿ ನಡುವೆ ಬಿಡುವು ಸಿಗಲ್ಲ. ಈ ರೆಡಿಮೆಡ್ ಲಕ್ಷ್ಮೀಯರಿಂದ ಸಮಯದ ಉಪಯೋಗವಾಗಲಿದೆ ಅಂತಾರೆ ಮಹಿಳೆಯರು. ಇನ್ನೂ ಈ ರೆಡಿಮೆಡ್ ಲಕ್ಷ್ಮೀಯರ ಬೆಲೆ 500 ರೂ.ನಿಂದ 20 ಸಾವಿರ ರೂ.ವರೆಗೆ ವಿವಿಧ ಅಲಂಕಾರಗಳಲ್ಲಿ ಇದೆ. ಈ ರೆಡಿಮೆಡ್ ಲಕ್ಷ್ಮೀಯರಿಗೆ ಸೀರೆ ಹಾಗೂ ಅಲಂಕಾರ ಸಹ ಮಾಡಲಾಗಿರುತ್ತದೆ.
ಜೊತೆಗೆ ಲಕ್ಷ್ಮೀ ಕೂಡಿಸಲು ಬೇಕಾದ ಲೋಟಸ್, ಲಕ್ಷ್ಮೀಯ ಅಲಂಕಾರಕ್ಕಾಗಿ ಆರ್ಚ್, ನವಿಲುಗಳು, ಆನೆ, ಕಿರೀಟದ ಆರ್ಚ್, ತೋಮಾಲೆ, ನೆಕ್ಲೇಸ್, ಸ್ಟೋನ್ ಲಾಂಗ್ ಹಾರ, ಕಾಸಿನ ಹಾರ, ಹಸ್ತಪಾದ, ಪ್ಲೇನ್ ಗೋಲ್ಡ್ ಹಸ್ತಪಾದಗಳನ್ನು ಸಹ ಲಕ್ಷ್ಮೀಯರಿಗೆ ತೊಡಿಸಲಾಗಿರುತ್ತದೆ. ಫ್ಯಾನ್ಸಿ ಬಾಳೆಗೊನೆ ಹಾಗೂ ಬಾಳೆ ಕಂಬಗಳು ಸಹ ಇರಲಿವೆ.