Wednesday, January 22, 2025

ನಾಗರ ಅಮವಾಸ್ಯೆ ; ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ಚಿಕ್ಕಮಂಗಳೂರು : ಪ್ರಸಿದ್ಧ ಧಾರ್ಮಿಕ ಯಾತ್ರ ಸ್ಥಳವಾದ ಮಲೈಮಾದಪ್ಪ ಸನ್ನಿಧಿಯಲ್ಲಿ ನಾಗರ ಅಮವಾಸ್ಯೆ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಜನವೋ ಜನ.

ಇಂದು ನಾಗರ ಅಮವಾಸ್ಯೆ ಹಿನ್ನೆಲೆ ಮಲೈಮಾದಪ್ಪನ ವಿಗ್ರಹವನ್ನು ಪುಷ್ಪಗಳಿಂದ ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ಈ ಹಿನ್ನೆಲೆ ಸ್ವಾಮಿಯ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬರುತ್ತಿರುವ ರಾಜ್ಯ ಹಾಗು ಹೊರ ರಾಜ್ಯದ ಭಕ್ತ ಸಾಗರ.

ಶಕ್ತಿ ಯೋಜನೆ ಅಡಿಯಲ್ಲಿ ಈ ಭಾರಿ ಎಲ್ಲಿ ನೋಡಿದರು ಮಹಿಳೆಯರೆ ಕಾಣಿಸಿಕೊಳ್ಳುತ್ತಿದ್ದು, ಮಾದಪ್ಪನ ದರ್ಶನಕ್ಕೆಂದು ಬಂದಿದ್ದ ಪುರುಷರು ಸೀಟ್​ಗಾಗಿ ಕಿಟಕಿಯಿಂದ ಬಸ್ ಹತ್ತುವ ಪರಿಸ್ಥಿತಿ ಎದುರಾಗಿದೆ. ಈ ಘಟನೆ ನೋಡಿದಾಗ ಕಳೆದ ಹತ್ತು ಹದಿನೈದು ವರ್ಷಗಳ ಹಿಂದಿನ ಪರಿಸ್ಥಿತಿ ಜ್ಞಾಪಿಸುವಂತಿದೆ.

ಬಳಿಕ ಪ್ರಯಾಣಿಕರನ್ನು ನಿಯಂತ್ರಿಸಲು ಲಾಠಿ ಹಿಡಿದು ನಿಂತ ಕೆಎಸ್ ಆರ್ ಟಿಸಿ ಅಧಿಕಾರಿಗಳು. ಅದಕ್ಕೂ ಜನರು ಬಗ್ಗದೆ ಇರುವುದರಿಂದ ಪೋಲಿಸ್ ಸಹಾಯ ಪಡೆದ ಅಧಿಕಾರಿಗಳು. ಈ ಘಟನಾ ಹಿನ್ನೆಲೆ ಕೋಳ್ಳೇಗಾಲ ಬಸ್ ನಿಲ್ಧಾಣದಲ್ಲಿ ಪೋಲಿಸರ ಸರ್ಪಗಾವಲು.

RELATED ARTICLES

Related Articles

TRENDING ARTICLES