Wednesday, January 22, 2025

ಸಲಾಂ..! ದೇಶದ ಜನರ ಗಮನ ಸೆಳೆದ ಶಾಸಕ ಬಂಟಿ ಬಾಂಗ್ಡಿಯಾ

ಬೆಂಗಳೂರು : ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಚಿಮೂರು ಕ್ಷೇತ್ರದ ಬಿಜೆಪಿ(BJP) ಶಾಸಕ ಬಂಟಿ ಬಾಂಗ್ಡಿಯಾ ಎಂದೇ ಜನಪ್ರಿಯರಾಗಿರುವ ಕೀರ್ತಿಕುಮಾರ್ ಮಿತೇಶ್ ಬಾಂಗ್ಡಿಯಾ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ.

ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತಮ್ಮ ಸ್ವಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದಾರೆ. ಸ್ವತಃ ಅವರೇ ದ್ವಿಚಕ್ರ ವಾಹನ ಚಲಾಯಿಸಿಕೊಂಡು ರೋಡ್ ಶೋನಲ್ಲಿ ಪಾಲ್ಗೊಂಡರು. ಯುವಶಕ್ತಿ ಸಂಘಟನಾ ಎಂಬ ರಾಜಕೀಯ ಸಂಘಟನೆ ಮುಖಾಂತರ ಗುರುತಿಸಿಕೊಂಡು ಕೀರ್ತಿಕುಮಾರ್ ಮಿತೇಶ್ ಬಾಂಗ್ಡಿಯಾ ಜನಮನ್ನಣೆ ಗಳಿಸಿದ್ದಾರೆ.

ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬಂಟಿ ಬಾಂಗ್ಡಿಯಾ, ಚಿಮೂರು ಕ್ಷೇತ್ರದ ಜನತೆಯ ಅಚ್ಚುಮೆಚ್ಚಿನ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ. ಯುವಶಕ್ತಿ ಸಂಘಟನೆ ಮೂಲಕ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನ ಮಾಡಿದ್ದಾರೆ.

2ನೇ ಬಾರಿ ಬಿಜೆಪಿಯಿಂದ ಗೆಲುವು

ಬಂಟಿ ಬಾಂಗ್ಡಿಯಾ ಅವರು ಚಿಮೂರು ಕ್ಷೇತ್ರದಿಂದ 2014ರಲ್ಲಿ ಮೊದಲ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ, ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ರು. ಇನ್ನು 2019ರಲ್ಲಿ ಎರಡನೇ ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಬಂಟಿ ಬಾಂಗ್ಡಿಯಾ ತಂದೆ ಮಿತೇಶ್ ಬಾಂಗ್ಡಿಯಾ ಕೂಡ 2012ರಿಂದ 2018ರವರೆಗೆ ಎಂಎಲ್​​ಸಿ ಆಗಿದ್ರು. ಬಂಟಿ ಬಾಂಗ್ಡಿಯಾ ಅವರು ಇದೀಗ ತಮ್ಮ ತಂದೆ ಅವರಂತೆಯೇ ಜನಮನ್ನಣೆ ಗಳಿಸಿದ್ದಾರೆ.

ಒಟ್ಟಾರೆ, ಜನಸೇವೆ ಮಾಡುತ್ತಾ ಕ್ಷೇತ್ರದ ಜನತೆಯ ವಿಶ್ವಾಸ ಗಳಿಸಿರುವ ಬಂಟಿ ಬಾಂಗ್ಡಿಯಾ, ಸ್ವಾತಂತ್ರೋತ್ಸವ ಸಂದರ್ಭದಲ್ಲಿ ರೋಡ್​ ಶೋ ನಡೆಸಿ ಜನರೊಂದಿಗೆ ಬೆರೆತಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

RELATED ARTICLES

Related Articles

TRENDING ARTICLES