Monday, December 23, 2024

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ಹಾವೇರಿ : ಸಾಲಭಾದೆ ತಾಳಲಾರದೆ ಹತ್ತಿ ಎಣ್ಣೆ ಸೇವಿಸಿ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ರಮೇಶ್ ಮಡ್ಡಿ (45) ಸಾವನ್ನಪ್ಪಿರುವ ರೈತ. ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದ ರೈತ ಇಂದು ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಸದೆ ಕೊನೆಯುಸಿರೆಳೆದಿದ್ದಾರೆ.

ಮೃತ ರೈತ ರಮೇಶ್ ಹಾನಗಲ್ ತಾಲ್ಲೂಕಿನ ಬಾಳಬಿಡಾ ಗ್ರಾಮದವರು. ಗ್ರಾಮದ ಕೆವಿಜಿ ಬ್ಯಾಂಕ್​ನಲ್ಲಿ 6 ಲಕ್ಕಕ್ಕೂ ಅಧಿಕ ಸಾಲ ಮಾಡಿದ್ದರು. ಕೃಷಿ ಚಟುವಟಿಕೆ ನಂಬಿ ಹೊಲದ ಮೇಲೆ ಸಾಲ ಮಾಡಿಕೊಂಡಿದ್ದರು. ಕೈ ಕೊಟ್ಟ ಮಳೆಯಿಂದ ಬೆಳೆಯೂ ಕೈಗೆಟುಕಿಲ್ಲ. ಮುಂದೆ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರು.

ಸಾಲಬಾದೆಯಿಂದ ಮನನೊಂದು ನಾಲ್ಕು ದಿನಗಳ ಹಿಂದೆ ಹತ್ತಿ ಎಣ್ಣೆ ಸೇವಿಸಿದ್ದರು. ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES