Saturday, January 18, 2025

ಯತ್ನಾಳ್ ಹುಚ್ಚ ಎಂದ ಸಚಿವ ಕೆ.ಎನ್ ರಾಜಣ್ಣ

ತುಮಕೂರು : ಆರು ತಿಂಗಳ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳಿಕೆ ಹರಿಬಿಟ್ಟಿದ್ದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ಯತ್ನಾಳ್ ಅವರನ್ನು ಹುಚ್ಚ ಎಂದು ಮೂದಲಿಸಿದ್ದಾರೆ.

ಹುಚ್ಚರ ಸ್ಟೇಟ್​ಮೆಂಟ್​ಗೆಲ್ಲ ನಾವು ಉತ್ತರ ಕೊಡಲು ಆಗುವುದಿಲ್ಲ. 6 ತಿಂಗಳಿಗೆ ಸರ್ಕಾರ ಬಿದ್ದೋಗುತ್ತೆ, ಮೂರು ತಿಂಗಳಿಗೆ ಬಿದ್ದೋಗುತ್ತೆ. ಆ ಹೇಳಿಕೆಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಕೆಲವರಿಗೆ ಮೆಂಟಲ್ ಪ್ರಾಬ್ಲಂ ಇರ್ತಾವೆ. ಕನಸು ಕಾಣುವವರಿಗೆ ಬೇಡ ಅನ್ನೋಕೆ ಆಗುತ್ತಾ? ಮೊದಲಿಂದ ಏನೇನೋ ಮಾಡ್ತಾ ಇದ್ದಾರೆ. ಅವರು ಏನು ಮಾಡ್ತಾರೋ ಮಾಡಲಿ. ನಮ್ಮ ಗ್ಯಾರಂಟಿ ಜನರಗೆ ತಲುಪಿಸಬೇಕು, ಅದನ್ನು ಮಾಡುತ್ತೇವೆ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES