ಬೆಂಗಳೂರು : ಶುಭ ಮುಹೂರ್ತ ಏನಿದೆ? ನಾವೇನು ಮಾಡ್ತಿದ್ದೀವಿ, ನಮಗೇನು ಗೊತ್ತಾಗಿದೆ. ಬಹಳ ಚರ್ಚೆ ಮಾಡ್ತಿದ್ರಲ್ಲ.. ಅದಕ್ಕೆಲ್ಲಾ ಉತ್ತರ ಕೊಡಬೇಕಲ್ವಾ? ಕೊಡೋಣ ಎಂದು ವಿಪಕ್ಷಗಳಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಟಕ್ಕರ್ ಕೊಟ್ಟಿದ್ದಾರೆ.
ದಾಖಲೆ ಬಿಡುಗಡೆಗೆ ಶುಭಗಳಿಗೆ, ಶುಭ ಮುಹೂರ್ತ ಯಾವಾಗ? ಎಂಬ ವಿಚಾರ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರು ಹೇಗೆ ಎಗ್ಸಾಸ್ಟ್ ಆಗಬೇಕು ಆಗಲಿ. ಇನ್ನೂ ಯಾರ್ಯಾರು ಮಾತಾಡಬೇಕೋ ಮಾತಾಡಲಿ. ಅವರದ್ದೆಲ್ಲಾ ಮುಗೀಲಿ, ಇನ್ನೂ ಟೈಮಿದೆ ಎಂದು ಕುಟುಕಿದ್ದಾರೆ.
ಆಪರೇಷನ್ ಹಸ್ತದ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮೊದಲು ಲೋಕಸಭಾ ಚುನಾವಣೆ ಮುಖ್ಯ. ನಮ್ಮ ಕಾರ್ಯಕರ್ತರಿಗೆ ಈಗಾಗಲೇ ಹೇಳಿದ್ದೇವೆ. ಕೆಲವು ಲೋಕಲ್ ಅಂಡರ್ ಸ್ಟ್ಯಾಂಡಿಂಗ್‌ಗಳನ್ನು ಕೆಲವೊಮ್ಮೆ ದ್ವೇಷ ಮಾಡಬೇಡಿ. ಜನರನ್ನ, ಕಾರ್ಯಕರ್ತರ ಪರವಾಗಿದ್ದು ಓಟ್ ಶೇರ್ ಜಾಸ್ತಿ ಮಾಡಿಕೊಳ್ಳಿ. ಅದನ್ನು ಲೋಕಲ್ ಲೀಡರ್ಸ್‌ಗೆ ಹೇಳಿದ್ದೇವೆ ಎಂದಿದ್ದಾರೆ.
ಅನೇಕರು ಪಕ್ಷ ಸೇರಲು ಬರ್ತಿದ್ದಾರೆ
ಕೆಲವೊಮ್ಮೆ ಪಕ್ಷದ ಎಗ್ಸಿಸ್ಟಿಂಗ್ ಇರೋದಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಪಕ್ಷದ ಶಕ್ತಿ ಮಾಡಿಕೊಳ್ಳಬೇಕು. ದೊಡ್ಡ ಲೀಡರ್ ಅಲ್ಲ, ಅನೇಕರು ಪಕ್ಷಕ್ಕೆ ಸೇರಲು ಬರ್ತಿದ್ದಾರೆ. ಅದನ್ನ ನಾವು ಮೊದಲು ಮಾಡಬೇಕಿದೆ ಎಂದು ಪರೋಕ್ಷವಾಗಿ ಹಲವು ಬಿಜೆಪಿಗೆ ಬರಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.