Wednesday, January 22, 2025

ತುಘಲಕ್ ಸರ್ಕಾರ ದಯನೀಯ ಪರಿಸ್ಥಿತಿ ತಲುಪಿದೆ

ಬೆಂಗಳೂರು : ರಾಜ್ಯದ ತುಘಲಕ್ ಸರ್ಕಾರ ದಯನೀಯ ಪರಿಸ್ಥಿತಿ ತಲುಪಿದೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಉದ್ಯೋಗ ಭರ್ತಿ ಆಶ್ವಾಸನೆ ನೀಡಿತ್ತು. ಈವರೆಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಈ ಸರ್ಕಾರ ಉದ್ಯೋಗಾಕಾಂಕ್ಷಿಗಳ ಮೂಗಿಗೆ ತುಪ್ಪ ಸವರಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದೆ.

ಯುವಕರಿಗೆ ಭರಪೂರ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಎಟಿಎಂ ಸರ್ಕಾರ (ATM Sarkara), ಈಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವತ್ತ ತಿರುಗಿ ಸಹ ನೋಡುತ್ತಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗಿರಲಿ, ಹಾಲಿ ಇರುವ ಉದ್ಯೋಗಿಗಳಿಗೆ ಸಂಬಳವನ್ನು ಸರಿಯಾಗಿ ನೀಡಲಾಗದಂತಹ ದಯನೀಯ ಪರಿಸ್ಥಿತಿಗೆ ತುಘಲಕ್ ಸರ್ಕಾರ ತಲುಪಿದೆ ಎಂದು ಛೇಡಿಸಿದೆ.

ಕಾಂಗ್ರೆಸ್ ಪಕ್ಷ (INC Karnataka) ಉದ್ಯೋಗಾಕಾಂಕ್ಷಿಗಳ ಭಾವನೆಗಳ ಜೊತೆ ಮೊಂಡಾಟವಾಡುತ್ತಿದೆ. ಅವರ ಜೀವನವನ್ನು ಹಾಳುಗೆಡವುತ್ತಿದೆ ಎಂದು ಚಾಟಿ ಬೀಸಿದೆ.

RELATED ARTICLES

Related Articles

TRENDING ARTICLES