Wednesday, January 22, 2025

ಮುಂದಿನ ಆರು ತಿಂಗಳಲ್ಲಿ ಬಿಜೆಪಿ, ಜೆಡಿಎಸ್​ ಖಾಲಿ ಖಾಲಿ : ಸಚಿವ ಶಿವರಾಜ ತಂಗಡಗಿ

ಕೊಪ್ಪಳ : ಬಿಜೆಪಿ ಪಕ್ಷದ ಒಳಜಗಳದಿಂದಾಗಿ ವಸಲಿಗ ಶಾಸಕರು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್​ ಸೇರ್ಪಡೆ ಮಾಡಿಕೊಳ್ಳುವ ವಿಚಾರ ಹೈಕಮಾಂಡ್​ ಗೆ ಬಿಟ್ಡಿದ್ದು, ಮುಂದಿನ ಆರು ತಿಂಗಳ ಒಳಗೆ ಹಲವರು ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಶಿವರಾಜ್​ ತಂಗಡಗಿ ತಿಳಿಸಿದರು.

ಕೊಪ್ಪಳ ತಾಲೂಕಿನ ಮುನಿರಾಬದ್ ನಲ್ಲಿ ಮಾತನಾಡಿದ ಅವರು, ಬಹುಶಃ ನನಗೆ ಅನಿಸಿದ ಮಟ್ಟಿಗೆ ಬಿಜೆಪಿ ಮತ್ತು ಜೆಡಿಎಸ್​ ಪಕ್ಷದಲ್ಲಿ ಇನ್ಮೇಲೆ ಯಾರು ಇರುವುದಿಲ್ಲ, ಕಾಂಗ್ರೆಸ್​ ಸರ್ಕಾರದ ಯೋಜನೆಗಳ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಿದೆ, ನೋಡೋರಿಲ್ಲ, ಕೇಳೋರಿಲ್ಲ : ಕೋಡಿ ಶ್ರೀ

ಮುಂದಿನ ಆರು ತಿಂಗಳ ಒಳಗೆ ಯಾರು ಬರ್ತಾರೋ ನನಗೆ ಗೊತ್ತಿಲ್ಲ, ಇದೆಲ್ಲವನ್ನು ನಮ್ಮ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು  ಸಚಿವ ಶಿವರಾಜ್​ ತಂಗಡಗಿ ಹೇಳಿದರು.

ಇನ್ನೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಈ ಕಡೆ ಕಾಂಗ್ರೆಸ್​ ಗೆದ್ದರು ಈ ಕಡೆ ಬಿಜೆಪಿ ಬಂದರು ನಾನೆ ಸಿಎಂ ಎಂಬ ನಿರೀಕ್ಷೆ ಇಟ್ಟಕೊಂಡಿದ್ದರು. ಅದು ಆಗಲಿಲ್ಲ ರಾಜ್ಯದ ಜನತೆ ಒಳ್ಳೆ ತೀರ್ಮಾನ ಕೊಟ್ಟಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಬಂದಿದೆ. ನಮಗೆ ಆಶೀರ್ವಾದ ಮಾಡಿದ ಜನರನ್ನು ನೆಚ್ಚಿಸುತ್ತೇವೆ. ಬಡವರ ದೀನ ದಲಿತರ ಬಗ್ಗೆ ಚಿಂತನೆ ಮಾಡು ಪಕ್ಷ ಅಧಿಕಾರಕ್ಕೆ ಬಂದಿದೆ ಎಂದ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

RELATED ARTICLES

Related Articles

TRENDING ARTICLES