Wednesday, January 22, 2025

ಅನ್ನಭಾಗ್ಯ: ಅಕ್ಕಿ ವಿತರಣೆ ವಿಳಂಬ !-ಸಚಿವ ಮುನಿಯಪ್ಪ

ಬೆಂಗಳೂರು : ಒಂದು ವಾರದೊಳಗೆ ಅಕ್ಕಿಪೂರೈಕೆ ಬಗ್ಗೆ ತೆಲಂಗಾಣ ಸರ್ಕಾರ ತಮ್ಮ ತೀರ್ಮಾನವನ್ನು ತಿಳಿಸಲಿದ್ದು ಬಳಿಕ  ಅಕ್ಕಿ ವಿತರಣೆ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್​ ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಈ ತಿಂಗಳು ಅಕ್ಕಿ ಪೂರೈಕೆ ಸಂಬಂಧ ನೆರೆಯ ತೆಲಂಗಾಣ ಕೃಷಿ ಮತ್ತು ಸಹಕಾರ ಸಚಿವರನ್ನ ಭೇಟಿಯಾಗಿದ್ದೇನೆ ಅಕ್ಕಿ ಪೂರೈಕೆಗೆ ಒಂದು ವಾರ ಕಾಲವಕಾಶ ಕೋರಿದ್ದಾರೆ, ರಾಜ್ಯದ ಜನತೆಗೆ ಅಕ್ಕಿ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವೆ, ಅಕ್ಕಿ ಕೊಡುವ ಕೆಲಸ ಆಗಬೇಕಿದೆ ಎಂದರು. ಸದ್ಯ ತೆಲಂಗಾಣ ಸರ್ಕಾರದ ಉತ್ತರಕ್ಕಾಗಿ ಕಾಯುತ್ತಿದ್ದೇವೆ, ಸ್ವಲ್ಪ ತಡವಾಗಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಎದೆ ಝಲ್ ಎನಿಸುವ ದೃಶ್ಯ : ಕಾರ್ ಶೆಡ್​ನಲ್ಲಿ ದಿಢೀರ್ ಪ್ರತ್ಯಕ್ಷವಾದ ಕಾಳಿಂಗ

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ಉಚಿತ 10 ಕೆಜಿ ಅಕ್ಕಿ ವಿತರಣೆಗೆ ಪೂರೈಕೆ ಪ್ರಮಾಣ ಕಡಿಮೆಯಾಗಿದ್ದರಿಂದ ಕಳೆದ ತಿಂಗಳು 5 ಕೆಜಿ ಅಕ್ಕಿಗೆ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿತ್ತು. ಈ ಬಾರಿ ತೆಲಂಗಾಣ ನೀಡುಲಿರುವ ಉತ್ತರದ  ಮೇಲೆ ಅಕ್ಕಿ ಕೊಡಲಿದ್ದಾರೆ ಅಥವಾ ಹಣ ವರ್ಗಾವಣೆಯಾಗಲಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

RELATED ARTICLES

Related Articles

TRENDING ARTICLES