Monday, December 23, 2024

ಯತ್ನಾಳ್​ಗೆ ಮೆಂಟಲ್ ಪ್ರಾಬ್ಲಂ ಇದೆ : ಡಿ.ಕೆ ಶಿವಕುಮಾರ್

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಆರು ತಿಂಗಳಲ್ಲಿ ಇರಲ್ಲ ಎಂಬ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಕೆಲವರಿಗೆ ಮೆಂಟಲ್ ಪ್ರಾಬ್ಲಂ ಇರ್ತಾವೆ ಎಂದು ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕನಸು ಕಾಣುವವರಿಗೆ ಬೇಡ ಅನ್ನೋಕೆ ಆಗುತ್ತಾ? ಮೊದಲಿಂದ ಏನೇನೋ ಮಾಡ್ತಾ ಇದ್ದಾರೆ. ಅವರು ಏನು ಮಾಡ್ತಾರೋ ಮಾಡಲಿ. ನಮ್ಮ ಗ್ಯಾರಂಟಿ ಜನರಗೆ ತಲುಪಿಸಬೇಕು, ಅದನ್ನು ಮಾಡುತ್ತೇವೆ ಎಂದು ಛೇಡಿಸಿದ್ದಾರೆ.

ಆಪರೇಶನ್ ಹಸ್ತ ವಿಚಾರವಾಗಿ ಮಾತನಾಡಿ, ನನ್ನ ಹತ್ತಿರ ಯಾರು ಏನು ಮಾತನಾಡಿಲ್ಲ. ಅವರವರ ರಾಜಕೀಯ ಜೀವನದ  ಬಗ್ಗೆ ಅವರವರೇ ತೀರ್ಮಾನ ಮಾಡ್ತಾರೆ. ಅವರವರ ಬದುಕಿನ ಬಗ್ಗೆ ಅವರವರ ಭವಿಷ್ಯದ ಬಗ್ಗೆ ಅವರವರು ತೀರ್ಮಾನ ಮಾಡ್ತಾರೆ ಎಂದು ಮಾರ್ಮಿಕವಾಗಿ ನುಡಿದ್ದಾರೆ.

ಹಿಂದೆ ಟಾರ್ಗೆಟ್ ಮಿಸ್

ನನ್ನ ಹತ್ತಿರ ಯಾರು ಚರ್ಚೆ ಮಾಡಿಲ್ಲ. ಹಿಂದೆ ಟಾರ್ಗೆಟ್ ಮಿಸ್ ಆದ ಬಗ್ಗೆ ಮುಂದೆ ಮಾತನಾಡುತ್ತೇನೆ. ಬೂತ್ ಗಳಲ್ಲಿ ವೋಟ್ ಶೇರಿಂಗ್ ಜಾಸ್ತಿ ಆಗಬೇಕು. ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಸಚಿವನಾಗಿ ನಾನು ಎಲ್ಲರನ್ನು ಒಟ್ಟಿಗೆ ತಗೆದುಕೊಂಡು ಹೋಗಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES