ಬೆಂಗಳೂರು : ವಂದೇ ಮಾತರಂ ಅನ್ನೋದು ಈಗ ಒಂಡೇ ಮಾತರಂ ಆಗಿದೆ ಎಂದು ನಟ ರಾಘವೇಂದ್ರ ರಾಜ್ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಪ್ಪಾಜಿ ನಮಗೆ ಯಾವಾಗಲೂ ಹೇಳೋರು.. ಇಂಡಿಯಾ ಅನ್ನೋದನ್ನು ನಿಲ್ಲಿಸಬೇಕು, ಭಾರತ ಅನ್ನಬೇಕು ಅಂತಿದ್ರು ಎಂದು ಹಳೆ ನೆನಪು ಮೆಲುಕು ಹಾಕಿದ್ದಾರೆ.
ನಾವು ದೇಶದ ಮೇಲೆ ಪ್ರೀತಿ, ಭಕ್ತಿ ಜಾಸ್ತಿ ಮಾಡಿಕೊಳ್ಳಬೇಕು. ಯಾರಾದರೂ ನಿಮ್ಮನ್ನು ಯಾವ ದೇಶ ಅಂದ್ರೆ ಭಾರತ ಅಂತ ಹೇಳಿ. ನಾನು ನಮ್ಮ ತಂದೆ ಹೇಳಿದ ಮಾತನ್ನು ಇಂದು ನಿಮ್ಮ ಜೊತೆ ಹಂಚಿಕೊಳ್ತಿದ್ದೀನಿ. ಮನೆ ಬಳಿ ಸಾಕಷ್ಟು ಅಭಿಮಾನಿಗಳು ಬಂದಿದ್ದಾರೆ. ಅವರ ಜೊತೆ ಫೋಟೋ ಮಾತ್ರ ತೆಗೆಸಿಕೊಳ್ತೀನಿ ಎಂದು ತಿಳಿಸಿದ್ದಾರೆ.
ಸುಖ ಪಡಬಾರದು ಅನ್ನೋ ನಿರ್ಧಾರ
ನಾನು ಆಫೀಸ್ ನೋಡ್ಕೋತಿದ್ದ ಕಾರಣ ಪ್ರತಿ ಸಲ ಅವನು ಬ್ರೀಫ್ ಕೇಸ್, ಲ್ಯಾಪ್ ಟ್ಯಾಪ್ ಕೊಡ್ತಿದ್ದ. ಅವನು ಅವನ ಕಾರ್ಡ್ ಅನ್ನೇ ಕೊಟ್ಟು ಏನು ಬೇಕೋ ಅದನ್ನು ತೆಗೆದುಕೊಳ್ಳಿ ಅಂತಿದ್ದ. ಅವರು ನಾಲ್ಕು ಜನ ಬಂದು ನನಗೆ ಶುಭ ಕೋರುತ್ತಿದ್ರು, ಅದನ್ನು ನಾನು ಕಳ್ಕೊಬಿಟ್ಟೆ. ಅವನು ಇಲ್ಲದ ಪ್ರಪಂಚದಲ್ಲಿ ಸುಖ ಪಡಬಾರದು ಅಂತ ನಿರ್ಧಾರ ಮಾಡಿದ್ದೀನಿ. ಅವನು ಶುರು ಮಾಡಿರುವ ಕೆಲಸಗಳನ್ನು ನಾನು ಮುಂದುವರೆಸ್ತೀನಿ ಎಂದು ರಾಘಣ್ಣ ಹೇಳಿದ್ದಾರೆ.
ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಸಾವಿನ ಬಗ್ಗೆ ಮಾತನಾಡಿದ ಅವರು, ಹುಟ್ಟು ಸಾವು ಅನ್ನೋದು ನೋಡ್ಕೊಂಡ್ ಹೊಗುತ್ತೆ. ಕೆಲವರಿಗೆ ಸಾವು ಬೇಗ ಬರುತ್ತೆ, ಕೆಲವರಿಗೆ ನಿಧಾನವಾಗಿ ಬರುತ್ತೆ ಎಂದು ಬೇಸರಿಸಿದ್ದಾರೆ.