Wednesday, January 22, 2025

ಅಪ್ಪು ಹೋದ್ಮೇಲೆ ಹೊಸ ಬಟ್ಟೆ ಹಾಕೋದೆ ಬಿಟ್ಟೆ : ರಾಘಣ್ಣ

ಬೆಂಗಳೂರು : ಪುನೀತ್ ರಾಜ್​ಕುಮಾರ್ ಹೋದ ಮೇಲೆ ಹೊಸ ಬಟ್ಟೆ ಹಾಕೋದೆ ಬೇಡ ಅನಿಸಿದೆ ಎಂದು ನಟ ರಾಘವೇಂದ್ರ ರಾಜ್​ಕುಮಾರ್ ಭಾವುಕರಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ ಎರಡು ವರ್ಷಗಳಿಂದ ಹುಟ್ಟು ಹಬ್ಬ ಆಚರಿಸಿಕೊಳ್ಳೋಕೆ‌ ಬೇಜಾರಾಗಿದೆ. ನನ್ನ ತಮ್ಮ ಹೋದ ಮೇಲೆ ಹುಟ್ಟು ಹಬ್ಬ ಬೇಡ ಅಂತ ತಿರ್ಮಾನ ಮಾಡಿದ್ದೀನಿ ಎಂದು ಹೇಳಿದ್ದಾರೆ.

ಇವತ್ತು ಬೆಳಗ್ಗೆ ಹೋಗಿ ಅವನ(ಅಪ್ಪು ಸಮಾಧಿ) ದರ್ಶನ ಮಾಡಿಕೊಂಡು ಬಂದೆ. ಅವನು ನನಗಿಂತ 10 ವರ್ಷ ಚಿಕ್ಕವನು.. ಅವನನ್ನು ಕಳೆದುಕೊಂಡುಬಿಟ್ಟೆ. ಅವನು ಹೋದ ಮೇಲೆ ಹೊಸ ಬಟ್ಟೆ ಹಾಕೋದೆ ಬೇಡ ಅನಿಸಿದೆ. ಅದಕ್ಕೆ ನಾನು ಈಗ ಕೇವಲ ಬಿಳಿ ಬಟ್ಟೆಗಳನ್ನು ಮಾತ್ರ ಹಾಕ್ತೀನಿ ಎಂದು ಬೇಸರಿಸಿದ್ದಾರೆ.

ಅಪ್ಪು ನೆನಪಲ್ಲೇ ಇರ್ತೀನಿ

ಪುನೀತ್ ರಾಜ್​ಕುಮಾರ್ ಇದ್ದಾಗ ಬೆಳಗ್ಗೆ ಬಂದು ಕಾಲಿಗೆ ನಮಸ್ಕರಿಸಿ, ಮಕ್ಕಳ ಕೈಲಿ ಗಿಫ್ಟ್ ಕಳುಹಿಸುತ್ತಿದ್ದ. ಇವತ್ತು ನಾನು ಬಹಳ ಎಮೋಷನಲ್ ಆಗಿದ್ದೀನಿ. ಅವನು ಹೋದ‌ ಮೇಲೆ ಕೇಕ್, ಹಾರ ಹಾಕಿಸಿಕೊಳ್ಳಬಾರದು ಅಂತ ಡಿಸೈಡ್ ಮಾಡಿದ್ದೀನಿ. ಇವತ್ತು ಪೂರ್ತಿ ಅವನ ನೆನಪಲ್ಲೇ ಇರ್ತೀನಿ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES