Monday, January 6, 2025

ಸಿದ್ರಾಮಯ್ಯ CM ಆದದ್ದು ನೋಡಲಾಗದವರಿಗೆ ಮೆಂಟಲ್ ಪ್ರಾಬ್ಲಂ : ಶಾಸಕ ಯತ್ನಾಳ್

ವಿಜಯಪುರ : ಕೆಲವರಿಗೆ ಮೆಂಟಲ್ ಪ್ರಾಬ್ಲಂ ಇರ್ತಾವೆ. ಕನಸು ಕಾಣುವವರಿಗೆ ಬೇಡ ಅನ್ನೋಕೆ ಆಗುತ್ತಾ?ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮೆಂಟಲ್ ಪ್ರಾಬ್ಲಂ ಇರುವುದು ಮುಖ್ಯಮಂತ್ರಿಯಾಗಲು ದಿಲ್ಲಿ ಅಡ್ಡಾಡಿ ಆಗದೆ ಇರುವವರಿಗೆ! ಎಂದು ಕುಟುಕಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದದ್ದು ನೋಡಲಾಗದೆ ಕೆಲವರರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅದರಲ್ಲೂ ದಿನ ಬೆಳಗಾದರೆ ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿಯೆಂದು ಕೆಲವು ಸಚಿವರು ಹೇಳುತ್ತಿರುವುದು ‘ನಿರ್ನಾಮ ಸಚಿವರಿಗೆ’ ನಿದ್ದೆ ಬಾರದಂತೆ  ಮಾಡಿರುವಂತಿದೆ ಎಂದು ಛೇಡಿಸಿದ್ದಾರೆ.

ಅಲ್ಲದೆ, ನೀವು ಸುಧಾರಿಸಿ.. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಎಂದು ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸದೇ ಶಾಸಕ ಯತ್ನಾಳ್ ಕೌಂಟರ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES