Friday, January 3, 2025

ಆಗಸ್ಟ್ 15, 2020.. ಇಂದೇ ಫ್ಯಾನ್ಸ್​ಗೆ ತಲಾ ಧೋನಿ ಶಾಕ್ ಕೊಟ್ಟ ದಿನ!

ಬೆಂಗಳೂರು : ಚಾಂಪಿಯನ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ.. ಅಭಿಮಾನಿಗಳ ನೆಚ್ಚಿನ ಕೂಲ್ ಕ್ಯಾಪ್ಟನ್, ತಲಾ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿ ಇಂದಿಗೆ ಮೂರು ವರ್ಷ.

ಈ ದಿನ ತಲಾ ಧೋನಿ ಹರ್ಟ್​ ಕೆಲಕ್ಷಣ ಸ್ತಬ್ದವಾಗಿತ್ತು. 2020ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ರಾತ್ರಿ ಎಂ.ಎಸ್ ಧೋನಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದರು.

2004ರಲ್ಲಿ ಧೋನಿ ಅವರು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದರು. ಸೌರವ್ ಗಂಗೂಲಿ ನಾಯಕತ್ವದ ತಂಡದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಟವಾಡಿದರು. ದ್ರಾವಿಡ್ ನಿವೃತ್ತಿಯ ನಂತರ ತಂಡವನ್ನು ಯಾರು ಮುನ್ನಡೆಸಬೇಕೆಂಬ ಗೊಂದಲಕ್ಕೆ ಎಡೆಮಾಡದೆಯೇ ಕ್ಯಾಪ್ಟನ್ ಕೂಲ್ ಧೋನಿಯ ಹೆಗಲಿಗೆ ನಾಯಕನ ಜವಬ್ದಾರಿಯನ್ನು ಹೊರಿಸಿತು.

ಚಾಂಪಿಯನ್ ನಾಯಕ ಎಂಎಸ್​ಡಿ

2007ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ಸ್​ ಟ್ರೋಫಿಯನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. 90 ಟೆಸ್ಟ್​ ಪಂದ್ಯ ಆಡಿರುವ ಧೋನಿ 4,876 ರನ್, 350 ಏಕದಿನ ಪಂದ್ಯಗಳಲ್ಲಿ 10,733 ರನ್, 98 ಟಿ-20 ಪಂದ್ಯಗಳಲ್ಲಿ 1,617 ರನ್ ಗಳಿಸಿದ್ದಾರೆ.

RELATED ARTICLES

Related Articles

TRENDING ARTICLES