Sunday, November 3, 2024

ಊರನ್ನು ಹೊಲಗೇರಿ ಮಾಡಿದ್ದಾರೆ : ನನ್ನ ಹೇಳಿಕೆ ತಿರುಚಿದ್ದೀರಿ ಎಂದ ಮಲ್ಲಿಕಾರ್ಜುನ್‌

ದಾವಣಗೆರೆ : ಊರನ್ನು ಹೊಲಗೇರಿ ಮಾಡಿದ್ದಾರೆ ಎಂಬ ವೀಡಿಯೋ ವೈರಲ್ ಆಗಿರುವ ಬಗ್ಗೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್‌ ಸ್ಪಷ್ಟನೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ನಾನು ಆ ರೀತಿಯಾಗಿ ಹೇಳಿಲ್ಲ ಎಂದು ಜಾರಿಕೊಂಡಿದ್ದಾರೆ.

ಗಾಧೆ ಮಾತನ್ನು ನಾನು ಬಳಸಿಲ್ಲ, ಒಳ್ಳೇದು ಮಾಡಿ ಹೊಲಸು ಮಾಡಬೇಡಿ ಅಂತ ಹೇಳಿದ್ದೇವೆ ಅಷ್ಟೇ. ಅದನ್ನು ನೀವು, ಅವರು ತಿರುಚಿದ್ದೀರಿ. ನಟ ಉಪೇಂದ್ರ ಅವರ ಪ್ರಕರಣ ಬಗ್ಗೆ ನನಗೆ ಏನು ಗೊತ್ತಿಲ್ಲ‌ ಎಂದು ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ಸರ್ಕಾರ ಬೀಳಿಸಲು ಹೋಗಿ ಬಿದ್ನಲ್ಲ

ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂಬ ಯತ್ನಾಳ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಐದು ವರ್ಷ ಸುಭದ್ರಾವಾಗಿ ಇರುತ್ತೆ‌. ಸಿದ್ದರಾಮಯ್ಯನವರು ಸರಿಯಾದ ಅಡಳಿತ ನೀಡುತ್ತಿದ್ದಾರೆ‌. ಬಿಜೆಪಿಯವರಿಗೆ ಬೇರೆ ಕೆಲಸ ಏನು ಇದೆ. ನಮ್ಮ ಸರ್ಕಾರ ಬೀಳಿಸಲು ಹೋಗಿ ಅವರೇ ಬಿದ್ನಲ್ಲ ಎನ್ನುವ ಮೂಲಕ ಯತ್ನಾಳ್ ಕೆಳಗೆ ಬಿದ್ದಿದ್ದಕ್ಕೆ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : ಈ ಕ್ಷಣ ನಾನು ಆರೂವರೆ ಕೋಟಿ ಕನ್ನಡಿಗರ ವಕ್ತಾರ: ಹೆಚ್​​ಡಿಕೆ

ನಾನೇ ಧ್ವಜಾರೋಹಣ ಮಾಡಿದ್ದೇನೆ

ನಮ್ಮ ದುರದೃಷ್ಟ ಐದು ವರ್ಷಗಳ ಕಾಲ ನಮ್ಮ ಜಿಲ್ಲೆಯವರು ಧ್ವಜಾರೋಹಣ ಮಾಡಿರಲಿಲ್ಲ. ಆದರೆ, ಇಂದು ನಾನೇ ಧ್ವಜಾರೋಹಣ ಮಾಡಿದ್ದೇನೆ. ಈ ಮೂಲಕ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದೆ, ರೈತರಿಗೆ ಕಷ್ಟವಾಗಿದೆ. ಮುಂದಿನ ವಾರದಲ್ಲಿ ಈ ಬಗ್ಗೆ ಸಭೆ ಕರೆಯಲಾಗಿದೆ‌. ಕೇಂದ್ರದ ಗೈಡ್ ಲೈನ್ ನೋಡಿಕೊಂಡು ನಿರ್ಧಾರ ಮಾಡುತ್ತೇವೆ. ಆ ನಂತರ ಬರಪೀಡಿತ ಪ್ರದೇಶ ಘೋಷಣೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES