Wednesday, January 22, 2025

ಒಬ್ಬ ವ್ಯಕ್ತಿ ಹೇಳಿಕೆ ಕೊಟ್ರೆ ಸರ್ಕಾರ ಬೀಳಲ್ಲ : ಎಂ.ಬಿ ಪಾಟೀಲ್

ವಿಜಯಪುರ : ಕಾಂಗ್ರೆಸ್ ಸರ್ಕಾರ ಆರು ತಿಂಗಳು ಇರಲ್ಲ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮಗೆ ಅಧಿಕಾರಕ್ಕೆ ತಂದಿದ್ದು ರಾಜ್ಯದ ಜನತೆ. ಯಾರೋ ಒಬ್ಬ ವ್ಯಕ್ತಿ ಸ್ಟೇಟ್​ಮೆಂಟ್ ಕೊಟ್ಟರೆ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರಲ್ಲ ಎಂದು ಕುಟುಕಿದ್ದಾರೆ.

ವಿಜಪುರ ಪಾಲಿಕೆ ಆಯುಕ್ತ ಕಡಿಮೆ ಕೇಡರ್ ನವರಿದ್ದಾರೆ ಅವರನ್ನು ಬದಲಾವಣೆ ಮಾಡಿ ಎಂದಿರುವ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಶಾಸಕರು ಸ್ವಲ್ಪ ಹಿಂದೆ ಹೋಗಲಿ. ಈ ಶಾಸಕರು ಹಿಂದೆ ವಿಜಯಕುಮಾರ ಮೆಕ್ಕಳಕಿ ಅವರನ್ನು ಮುಂದುವರೆಸಿ ಎಂದು ಪತ್ರ ಕೊಟ್ಟಿದ್ದರು. ಈಗಿನ ಕಮಿಷನರ್ ಬಿಲೋ ಕೇಡರ್ ಎಂದು ಹೇಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಹಿಂದಿನ ಕಮಿಷನರ್ ವಿಜಯಕುಮಾರ ಮೆಕ್ಕಳಕಿ ಕೂಡಾ ಸೇಮ್ ಕೇಡರ್ ನವರಿದ್ದರು. ಈ ಶಾಸಕರಿಗೆ ಅರವು-ಮರವು ಹಾರಿರಬೇಕು ಎಂದು ಎಂ.ಬಿ ಪಾಟೀಲ್ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES