Wednesday, January 22, 2025

ಕ್ಷಮೆ ಕೇಳಿದ ರಚಿತಾ ರಾಮ್

ಬೆಂಗಳೂರು : ಇದು ಆಕಸ್ಮಿಕವಾಗಿ ನಡೆದ ಘಟನೆ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ. ಮನಸಾರೆ ನಾನು ಕ್ಷಮೆ ಕೇಳುತ್ತೇನೆ ಎಂದು ನಟಿ ರಚಿತಾ ರಾಮ್ ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ನಡೆಯುತ್ತಿದ್ದ ಫ್ಲವರ್ ಶೋಗೆ ನಟಿ ರಚಿತಾ ರಾಮ್​ ಅತಿಥಿಯಾಗಿ ಭಾಗಿಯಾಗಿದ್ದರು. ನಟಿ ರಚಿತಾ ರಾಮ್ ಇದ್ದ ಕಾರು ಲಾಲ್ ಬಾಗ್ ಗೇಟ್ ಬಳಿ ಹೋಗುತ್ತಿದ್ದ ವೇಳೆ ಸಿಬ್ಬಂದಿಗೆ ಡಿಕ್ಕಿ ಹೊಡೆದಿತ್ತು.

ಸಿಬ್ಬಂದಿ ಜಸ್ಟ್​ ಮಿಸ್ ಎಂಬಂತೆ ಅಪಘಾತದಿಂದ ತಪ್ಪಿಸಿಕೊಂಡಿದ್ರು. ಈ ವಿಡಿಯೋ ವೈರಲ್ ಆಗಿತ್ತು. ಇದೀಗ ಲಾಲ್​ ಬಾಗ್​ ಸಿಬ್ಬಂದಿ ಜೊತೆಯೇ ಕುಳಿತು ನಟಿ ರಚಿತಾ ರಾಮ್​ ವಿಡಿಯೋ ಮೂಲಕವೇ ಪ್ರತಿಕ್ರಿಯಿಸಿದ್ದಾರೆ.

ನನ್ನನ್ನು ಕ್ಷಮಿಸಿ ಬಿಡಿ

ರಚಿತಾ ರಾಮ್​ ಸಿಬ್ಬಂದಿಯನ್ನು ಮನೆಗೆ ಕರೆಸಿ ಕ್ಷಮೆ ಕೇಳಿದ್ದಾರೆ. ನನ್ನ ಕಾರು ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ಇದು ಆಕಸ್ಮಿಕವಾಗಿ ನಡೆದ ಘಟನೆ. ಆಗ ನನಗೆ ಗೊತ್ತಾಗಲಿಲ್ಲ ಎಂದು ಕ್ಷಮೆ ಕೇಳಿದ್ದಾರೆ. ಯಾವುದೇ ಕಾರ್ಮಿಕರಿಗೆ ಈ ಘಟನೆಯಿಂದ ನೋವಾಗಿದ್ದಲ್ಲಿ ನನ್ನನ್ನು ಕ್ಷಮಿಸಿ ಬಿಡಿ ಎಂದು ಸಿಬ್ಬಂದಿ ಬಳಿ ಕ್ಷಮೆ ಕೇಳಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES