Wednesday, January 22, 2025

ಮಗಳ ಬರ್ತ್‌ಡೇ ದಿನವೇ ಯೋಧ ಸಾವು!

ಮೈಸೂರು : ಮಗಳ ಹುಟ್ಟುಹಬ್ಬಕ್ಕೆಂದು ಊರಿಗೆ ಬಂದಿದ್ದ ಯೋಧ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

ಸುರೇಶ್ ನಿಧನ ಹೊಂದಿದ ಯೋಧ. ಜಮ್ಮು-ಕಾಶ್ಮೀರದ ವಾಡಿ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ನಾಯಕ್ ಸುಬೇದಾರ್ ಆಗಿ ಸುರೇಶ್ ಸೇವೆ ಸಲ್ಲಿಸುತ್ತಿದ್ದರು. ಪುತ್ರಿ ಪ್ರಕೃತಿಯ 5 ನೇ ವರ್ಷದ ಹುಟ್ಟುಹಬ್ಬ ಆಚರಿಸಲು ಹೊಸ ಅಗ್ರಹಾರ ಗ್ರಾಮಕ್ಕೆ ಆಗಮಿಸಿದ್ದರು.

ಇದನ್ನೂ ಓದಿ: ಕುಖ್ಯಾತ ಹನಿಟ್ರ್ಯಾಪ್​ ಗ್ಯಾಂಗ್​ ಬಂಧನ!

ಅಲ್ಲದೆ, ಜನ್ಮದಿನಾಚರಣೆ ಅಂಗವಾಗಿ ಡೋರ್ನಹಳ್ಳಿಯ ಅನಾಥಾಶ್ರಮಕ್ಕೆ ಊಟ ನೀಡಲೆಂದು ಸಿದ್ಧರಾಗುತ್ತಿದ್ದಾಗ ಕುಸಿದುಬಿದ್ದಿದ್ದಾರೆ. ಕೂಡಲೇ ಸುರೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು. ಆದರೇ, ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಸರ್ಕಾರಿ ನಿಯಮಗಳಂತೆ ಗಾಳಿಯಲ್ಲಿ ಗುಂಡು ಹಾರಿಸಿ ಮೃತ ಸುರೇಶ್​ ರಿಗೆ ಗೌರವ ಸಲ್ಲಿಸಿ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

RELATED ARTICLES

Related Articles

TRENDING ARTICLES