ಬೆಂಗಳೂರು : ಆಕ್ಷೇಪಾರ್ಹ ಪದ ಬಳಕೆಯ ಪ್ರಕರಣದಲ್ಲಿ ನಟ ಉಪೇಂದ್ರ ವಿರುದ್ದದ ಎಫ್ಐಆರ್ ಗೆ ತಡೆ ನೀಡುವ ಮೂಲಕ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.
ನಟ ಉಪೇಂದ್ರ ಅವರ ವಿರುದ್ದ ಪರಿಶಿಷ್ಟ ಜಾತಿ ಸಮುದಾಯವನ್ನು ನಿಂದನೆ ಮಾಡುವ ರೀತಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಚನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಉಪೇಂದ್ರ ಆ ಪದ ಬಳಸಿದ್ದಾರೆ, SORRYನೂ ಕೇಳಿದ್ದಾರೆ : ಛಲವಾದಿ ನಾರಾಯಣಸ್ವಾಮಿ
ತಮ್ಮ ವಿರುದ್ದ ದಾಖಲಾಗಿರುವ ಎಫ್ಐಆರ್ ಗೆ ತಡೆ ನೀಡುವಂತೆ ಕೋರಿ ಉಪೇಂದ್ರ ತಮ್ಮ ವಕೀಲರ ಮೂಲಕ ಇಂದು ನ್ಯಾಯಾಲಯ ಮೆಟ್ಟಿಲೇರಿದ್ದರು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಅವರಿದ್ದ ನ್ಯಾಯಪೀಠ ಇಬ್ಬರ ವಾದವಿವಾದಗಳನ್ನು ಆಲಿಸಿದರು.
ಉಪೇಂದ್ರ ಪರ ವಾದ ಮಂಡಿಸಿದ ವಕೀಲ ಉದಯ್ ಹೊಳ್ಳ ಅವರು, ಕೇವಲ ಗಾದೆ ಮಾತು ಉಲ್ಲೇಖಿಸಿ ನಟ ಉಪೇಂದ್ರ ಹೇಳಿಕೆ ನೀಡಿದ್ದಾರೆ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಅವರ ವಿರುದ್ದ ಹಲವು ಪೊಲೀಸ್ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಗಾದೆ ಬಳಸಿದ್ದಕ್ಕೆ ಇಷ್ಟೊಂದು FIR ಯಾಕೆ? ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಹೇಮಂತ್ ಚಂದನ್ ಅವರು ಚನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ಠಾಣೆಯಲ್ಲಿ ಸಲ್ಲಿಕೆಯಾಗಿರುವ ಎಫ್ಐಆರ್ ಗೆ ತಡೆ ನೀಡಿದೆ.
ನ್ಯಾಯಾಲಯದ ತೀರ್ಪಿನಿಂದ ನಟ ಉಪೇಂದ್ರ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.