Friday, May 17, 2024

SKY ಸ್ಫೋಟಕ್ಕೆ ರೋಹಿತ್, ರೈನಾ, ಯುವಿ ದಾಖಲೆ ಪೀಸ್​.. ಪೀಸ್..!​

ಬೆಂಗಳೂರು : SKY ಘರ್ಜನೆಗೆ ಹಿಸ್ಟರಿ ಕ್ರಿಯೇಟ್. ಹಿಟ್ ಮ್ಯಾನ್ ರೋಹಿತ್ ಶರ್ಮಾ, ಚಿನ್ನ ತಲಾ ಸುರೇಶ್ ರೈನಾ ಹಾಗೂ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ದಾಖಲೆ ಪೀಸ್​.. ಪೀಸ್..!​

ಯೆಸ್, ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವೆ ನಡೆದ 5ನೇ ಟ-20 ಪಂದ್ಯದಲ್ಲಿ ಮಿ.360 ಖ್ಯಾತಿಯ SKY ಬೊಂಬಾಟ್ ಪ್ರದರ್ಶನ ನೀಡಿದರು. ವಿಂಡೀಸ್ ಬೌಲರ್​ಗಳನ್ನು ದಂಡಿಸಿದ ಸೂರ್ಯ ಆಕರ್ಷಕ ಅರ್ಧಶತಕ ಸಿಡಿಸಿದರು. ಆ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

45 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ ಅರ್ಧಶತಕ(61) ಸಿಡಿಸಿದರು. ಇದರಲ್ಲಿ 3 ಬೊಂಬಾಟ್ ಸಿಕ್ಸರ್ ಹಾಗೂ 4 ಬೌಂಡರಿ ಇದ್ದವು. ಆ ಮೂಲಕ ಟಿ-20 ಮಾದರಿಯಲ್ಲಿ ಮೊದಲ 50 (ಇನ್ನಿಂಗ್ಸ್​ಗಳಲ್ಲಿ​) ಪಂದ್ಯಗಳಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. 172 ಸ್ಟ್ರೈಟ್​ ರೇಟ್​ನಲ್ಲಿ SKY 1,841 ರನ್​ ಕಲೆಹಾಕಿದ್ದಾರೆ. ಇನ್ನೂ, ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ಮೂರನೇ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್, ನಾಲ್ಕನೇ ಸ್ಥಾನದಲ್ಲಿ ಶಿಖರ್ ಧವನ್ ಇದ್ದಾರೆ.

ಮೊದಲ 50 ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರು

  • 1,943 : ವಿರಾಟ್ ಕೊಹ್ಲಿ (SR 138)
  • 1,841 : ಸೂರ್ಯಕುಮಾರ್ ಯಾದವ್ (SR 172)*
  • 1,751 : ಕೆ.ಎಲ್ ರಾಹುಲ್ (SR 143)
  • 1,311 : ಶಿಖರ್ ಧವನ್ (SR 130)
  • 1,219 : ರೋಹಿತ್ ಶರ್ಮಾ (SR 128)
  • 1,163 : ಸುರೇಶ್ ರೈನಾ (SR 133)
  • 1,150 : ಯುವರಾಜ್ ಸಿಂಗ್ (SR 135)

2023ರಲ್ಲಿ ಹೆಚ್ಚು ರನ್​ ಗಳಿಸಿದ ಬ್ಯಾಟರ್

ಇನ್ನೂ, ಪ್ರಸಕ್ತ 2023ರಲ್ಲಿ ಟಿ-20 ಮಾದರಿಯಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ಬ್ಯಾಟರ್​ಗಳ ರೇಸ್‌ನಲ್ಲಿ ಸೂರ್ಯ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಸೂರ್ಯ 372 ರನ್ ಗಳಿಸಿದ್ದಾರೆ. ಮಾರ್ಕ್ ಚಾಪ್ಮನ್ 353, ಲಿಟ್ಟನ್ ದಾಸ್ 282, ಮಿಚೆಲ್ 254, ಶುಭಮನ್ ಗಿಲ್ 218 ರನ್​ ಗಳಿಸಿ ನಂತರ ಸ್ಥಾನದಲ್ಲಿದ್ದಾರೆ.

ಅದ್ಭುತ್ ಸ್ಟ್ರೈಕ್​ ರೇಟ್

49 ಇನ್ನಿಂಗ್ಸ್​ನ ನಂತರ ಉತ್ತಮ ಸ್ಟ್ರೈಕ್ ರೇಟ್‌ ಹೊಂದಿರುವ ಬ್ಯಾಟರ್​ಗಳ ಪೈಕಿಯೂ ಸೂರ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • ಸೂರ್ಯಕುಮಾರ್ : 174.34
  • ಕೆ.ಎಲ್ ರಾಹುಲ್ : 143.09
  • ವಿರಾಟ್ ಕೊಹ್ಲಿ : 136.98
  • ಬಾಬರ್ : 131.61
  • ರಿಜ್ವಾನ್ : 127.83

RELATED ARTICLES

Related Articles

TRENDING ARTICLES