ಬೆಂಗಳೂರು : SKY ಘರ್ಜನೆಗೆ ಹಿಸ್ಟರಿ ಕ್ರಿಯೇಟ್. ಹಿಟ್ ಮ್ಯಾನ್ ರೋಹಿತ್ ಶರ್ಮಾ, ಚಿನ್ನ ತಲಾ ಸುರೇಶ್ ರೈನಾ ಹಾಗೂ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ದಾಖಲೆ ಪೀಸ್.. ಪೀಸ್..!
ಯೆಸ್, ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ 5ನೇ ಟ-20 ಪಂದ್ಯದಲ್ಲಿ ಮಿ.360 ಖ್ಯಾತಿಯ SKY ಬೊಂಬಾಟ್ ಪ್ರದರ್ಶನ ನೀಡಿದರು. ವಿಂಡೀಸ್ ಬೌಲರ್ಗಳನ್ನು ದಂಡಿಸಿದ ಸೂರ್ಯ ಆಕರ್ಷಕ ಅರ್ಧಶತಕ ಸಿಡಿಸಿದರು. ಆ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.
45 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ ಅರ್ಧಶತಕ(61) ಸಿಡಿಸಿದರು. ಇದರಲ್ಲಿ 3 ಬೊಂಬಾಟ್ ಸಿಕ್ಸರ್ ಹಾಗೂ 4 ಬೌಂಡರಿ ಇದ್ದವು. ಆ ಮೂಲಕ ಟಿ-20 ಮಾದರಿಯಲ್ಲಿ ಮೊದಲ 50 (ಇನ್ನಿಂಗ್ಸ್ಗಳಲ್ಲಿ) ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. 172 ಸ್ಟ್ರೈಟ್ ರೇಟ್ನಲ್ಲಿ SKY 1,841 ರನ್ ಕಲೆಹಾಕಿದ್ದಾರೆ. ಇನ್ನೂ, ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ಮೂರನೇ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್, ನಾಲ್ಕನೇ ಸ್ಥಾನದಲ್ಲಿ ಶಿಖರ್ ಧವನ್ ಇದ್ದಾರೆ.
ಮೊದಲ 50 ಇನ್ನಿಂಗ್ಸ್ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರು
- 1,943 : ವಿರಾಟ್ ಕೊಹ್ಲಿ (SR 138)
- 1,841 : ಸೂರ್ಯಕುಮಾರ್ ಯಾದವ್ (SR 172)*
- 1,751 : ಕೆ.ಎಲ್ ರಾಹುಲ್ (SR 143)
- 1,311 : ಶಿಖರ್ ಧವನ್ (SR 130)
- 1,219 : ರೋಹಿತ್ ಶರ್ಮಾ (SR 128)
- 1,163 : ಸುರೇಶ್ ರೈನಾ (SR 133)
- 1,150 : ಯುವರಾಜ್ ಸಿಂಗ್ (SR 135)
2023ರಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್
ಇನ್ನೂ, ಪ್ರಸಕ್ತ 2023ರಲ್ಲಿ ಟಿ-20 ಮಾದರಿಯಲ್ಲಿ ಅತಿ ಹೆಚ್ಚು ರನ್ಗಳಿಸಿರುವ ಬ್ಯಾಟರ್ಗಳ ರೇಸ್ನಲ್ಲಿ ಸೂರ್ಯ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಸೂರ್ಯ 372 ರನ್ ಗಳಿಸಿದ್ದಾರೆ. ಮಾರ್ಕ್ ಚಾಪ್ಮನ್ 353, ಲಿಟ್ಟನ್ ದಾಸ್ 282, ಮಿಚೆಲ್ 254, ಶುಭಮನ್ ಗಿಲ್ 218 ರನ್ ಗಳಿಸಿ ನಂತರ ಸ್ಥಾನದಲ್ಲಿದ್ದಾರೆ.
ಅದ್ಭುತ್ ಸ್ಟ್ರೈಕ್ ರೇಟ್
49 ಇನ್ನಿಂಗ್ಸ್ನ ನಂತರ ಉತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ಗಳ ಪೈಕಿಯೂ ಸೂರ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ.
- ಸೂರ್ಯಕುಮಾರ್ : 174.34
- ಕೆ.ಎಲ್ ರಾಹುಲ್ : 143.09
- ವಿರಾಟ್ ಕೊಹ್ಲಿ : 136.98
- ಬಾಬರ್ : 131.61
- ರಿಜ್ವಾನ್ : 127.83