ತುಮಕೂರು : ಸಿದ್ದಗಂಗಾ ಮಠದಲ್ಲಿ ಇಂಥ ದುರ್ಘಟನೆ ನಡೆಯಬಾರದಿತ್ತು. ಕುಟುಂಬಕ್ಕೆ ದುಃಖ ಭರಿಸಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಕೊಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಕ್ಯಾತ್ಸಂದ ಸಮೀಪದ ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆಗೆ ಬಿದ್ದು ನಾಲ್ವರು ಸಾವನ್ನಪ್ಪಿದ್ದು, ಈ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ಡಾ.ಜಿ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗೋ ಕಟ್ಟೆ ಸುತ್ತ ಮುಳ್ಳು ತಂತಿ ಗ್ಯಾಲರಿ ಹಾಕಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದರು. ಅಷ್ಟರ ವೇಳೆಗೆ ಈ ದುಘಟನೆ ಸಂಭವಿಸಿದೆ. ಈಗ ಮಠದ ವಿದ್ಯಾರ್ಥಿಗಳಿಗೆ ಇಲ್ಲಿ ಯಾರು ಬಾರದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಈಗ ಶವಗಾರಕ್ಕೆ ಭೇಟಿ ಕೊಟ್ಟು ಮೃತರ ಕುಟುಂಬಕ್ಕೆ ಸಾತ್ವಾನ ಹೇಳ್ತೀನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಶೀಘ್ರವೇ ಲೋಕಸಭೆ ಆಕಾಂಕ್ಷಿಗಳ ಪಟ್ಟಿ ತಯಾರು : ಡಾ.ಬಿ.ಎಸ್ ಯಡಿಯೂರಪ್ಪ
ಘಟನೆ ನಡೆದಿದ್ದು ಹೇಗೆ?
ನಿನ್ನೆ ಮಧ್ಯಾಹ್ನ 2 ಗಂಟೆಯಲ್ಲಿ ರಂಜಿತ್ ಎಂಬ ವಿದ್ಯಾರ್ಥಿಯ ತಾಯಿ ಲಕ್ಷ್ಮೀ ಎಂಬುವವರು ಊಟ ತಂದಿದ್ದಾರೆ. ಊಟ ಮಾಡಲು ಈ ಕಟ್ಟೆ ಬಳಿ ಬಂದಿದ್ದಾರೆ. ಕಾಲು ಕೆಸರಾಗಿದೆ ಅಂತ ಕಾಲು ತೊಳೆದುಕೊಳ್ಳಲು ರಂಜಿತ್ ಹೋಗಿದ್ದಾನೆ. ಆಗ ಮೇಲೆ ಬರಲು ಕಷ್ಟ ಆಗಿದೆ. ಅವನನ್ನು ರಕ್ಷಣೆ ಮಾಡಲು ತಾಯಿ ನೀರಿನಲ್ಲಿ ಬಿದಿದ್ದಾರೆ. ಅವರನ್ನ ಕಾಪಾಡಲು ಇಬ್ಬರು ವಿದ್ಯಾರ್ಥಿಗಳು ಹೋಗಿದ್ದಾರೆ. ಅವರೆಲ್ಲರನ್ನು ರಕ್ಷಣೆ ಮಾಡಲು ಮಹದೇವಪ್ಪ ಹೋಗಿದ್ದಾರೆ. ಅವಾಗ ರಂಜಿತ್ ಎಂಬಾತನನ್ನ ರಕ್ಷಣೆ ಮಾಡಿದ್ದಾರೆ. ಇದರಿಂದ ನೀರಿನಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.
ನಟ ಉಪೇಂದ್ರ ವಿರುದ್ಧ ಪ್ರಕರಣ ದಾಖಲು ವಿಚಾರವಾಗಿ ಮಾತನಾಡಿದ ಅವರು,ಈ ಬಗ್ಗೆ ಮಾಹಿತಿ ಇಲ್ಲ. ಡಿಟೈಲ್ ಪಡೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.