ಬೆಂಗಳೂರು : 6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂಬ ಶಾಸಕ ಯತ್ನಾಳ್ ಹೇಳಿಕೆ ವಿಚಾರಕ್ಕೆ ಮಾಜಿ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಕುಮಾರಸ್ವಾಮಿ ಸರ್ಕಾರ ಬಿದ್ದಾಗಲೂ ಅವರು ನಂಬಿರಲಿಲ್ಲ. ಯತ್ನಾಳ್ ಕೂಡ ಅದೇ ಅರ್ಥದಲ್ಲಿ ಹೇಳಿರಬೇಕು ಎಂದು ಯತ್ನಾಳ್ ಪರ ಬ್ಯಾಟ್ ಬೀಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಕೂಡ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ. ಬೇರೆ ಸರ್ಕಾರದ ಅವಧಿಯಲ್ಲಿ 6 ತಿಂಗಳ ಬಳಿಕ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿತ್ತು. ನಮ್ಮ ಸರ್ಕಾರಕ್ಕೆ ಆರಂಭದಲ್ಲೇ ಕಮಿಷನ್ ಆರೋಪ ಬಂದಿದೆ. ಇದು ನಮ್ಮ ವ್ಯಥೆ ಅಂತ ಸಿಎಂ ಹೇಳಿದ್ದಾರೆ. ನಾನು ಈ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೀನಿ. ರಾಜ್ಯದ ಜನಕ್ಕೆ ಈ ಸರ್ಕಾರದ ಬಗ್ಗೆ ಸಾಕಾಗಿದೆ. ನಾವು ಜನರ ಪರ ಹೋರಾಟ ಮಾಡ್ತೀವಿ ಎಂದು ಆರ್. ಅಶೋಕ್ ಹೇಳಿದ್ದಾರೆ.
ನಾವು ಕಾಂಗ್ರೆಸ್ ಥರ ಅಲ್ಲ
ನಾವು 66 ಶಾಸಕರೂ ವಿಪಕ್ಷ ನಾಯಕರೇ. ಮೊದಲ ಅಧಿವೇಶನದಲ್ಲಿ 10 ಜನ ಸದಸ್ಯರು ಸಸ್ಪೆಂಡ್ ಆಗಿದ್ದೀವಿ. ಇದು ಇತಿಹಾಸದಲ್ಲೇ ಮೊದಲು. ನಮ್ಮ ಸಮರ್ಥ ಹೋರಾಟಕ್ಕೆ ಇದೇ ಸಾಕ್ಷಿ. ವರಿಷ್ಠರು ಆಗಸ್ಟ್ 15ರ ನಂತರ ವಿಪಕ್ಷ ನಾಯಕನ ಆಯ್ಕೆ ಮಾಡ್ತಾರೆ. ಎಲ್ಲರ ಅಭಿಪ್ರಾಯ ಪಡೆದು ಆಯ್ಕೆ ಮಾಡ್ತಾರೆ. ನಾವು ಕಾಂಗ್ರೆಸ್ ಥರ ಅಲ್ಲ, ಎಲ್ಲರ ಅಭಿಪ್ರಾಯ ಪಡೆಯುತ್ತೇವೆ ಎಂದು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ.