Wednesday, January 22, 2025

6 ತಿಂಗಳಲ್ಲಿ ಮೋದಿನೇ ಉಳಿಯಲ್ಲ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಬೀಳುತ್ತೆ ಎಂಬ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳಲ್ಲಿ ಬಿಜೆಪಿ ಉಳಿಯಲ್ಲ. ರಾಜಕೀಯ ಮಾಡಲು ಅವರಿಗಷ್ಟೇ ಬರುತ್ತಾ? ನಮಗೂ ಬರುತ್ತೆ. ಆರು ತಿಂಗಳಲ್ಲಿ ಕಾದು ನೋಡಿ, ಎಷ್ಟು ಜನ ಬಿಜೆಪಿಯಲ್ಲಿ ಇರ್ತಾರೆ ನೋಡಿ ಎಂದು ಟಕ್ಕರ್ ಕೊಟ್ಟಿದ್ದಾರೆ.

ಬಿಜೆಪಿಯವರು ಮತ್ತೊಮ್ಮೆ ಆಪರೇಷನ್ ಕಮಲ ಮಾಡುವ ಚಿಂತನೆಯಲ್ಲಿದ್ದಾರೆ. ಆದ್ರೆ, ಕರ್ನಾಟಕದಲ್ಲಿ ಅವರ ಆಟ ನಡೆಯಲ್ಲ. ಕಾಂಗ್ರೆಸ್ ಸರ್ಕಾರದ ಹುಳುಕನ್ನು ಹುಡುಕಲು ಯತ್ನಿಸಲು ಬಳಹ ಶ್ರಮ ಹಾಕ್ತಿದ್ದಾರೆ. ಅದರ ಅರ್ಧ ಶ್ರಮವನ್ನು ಪಕ್ಷದ ಅಭಿವೃದ್ದಿಗೆ ಹಾಕಲಿ ಎಂದು ಚಾಟಿ ಬೀಸಿದ್ದಾರೆ.

ಅವ್ರ ಯೋಗ್ಯತೆನೇ ಇಷ್ಟು

ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಆರು ತಿಂಗಳಲ್ಲಿ ಅವರ ಸರ್ಕಾರ ಮಾಡಿ ತೋರಿಸಲಿ. ಏನು ರಾಷ್ಟ್ರಪತಿ ಆಡಳಿತ ತರ್ತಾರಾ? ಮಣಿಪುರ ರೀತಿಯ ಸ್ಥಿತಿ ಇದೆಯಾ?ಅವರ ಯೋಗ್ಯತೆನೇ ಇಷ್ಟು ಎಂದು ಫುಲ್ ಗರಂ ಆಗಿದ್ದಾರೆ.

RELATED ARTICLES

Related Articles

TRENDING ARTICLES