Sunday, December 22, 2024

15 ದಿನಗಳಲ್ಲಿ ಕಾಂಗ್ರೆಸ್ ಸಚಿವರ ಭ್ರಷ್ಟಾಚಾರ ಬಯಲು : ಬಸವರಾಜ್ ದಡೇಸೂಗೂರು

ಕೊಪ್ಪಳ : ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿರುದ್ದ ಮಾಜಿ ಶಾಸಕ ಬಸವರಾಜ್ ದಡೇಸೂಗೂರು ಗಂಭೀರ ಆರೋಪ‌ ಮಾಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಹಗರಣ ಹೊರಗಡೆ ಬರುತ್ತೆ. ಇನ್ನು 15-20 ದಿನಗಳಲ್ಲಿ ಕಾದು ನೋಡಿ ಸಚಿವರ ಹಗರಣ ಹೊರಗಡೆ ಬರುತ್ತೆ ಎಂದು ಬಾಂಬ್ ಸಿಡಿಸಿದ್ದಾರೆ.

ಇದು ಆರಂಭ, ಕೊನೆಯಲ್ಲ, ಇನ್ನು ಕೇವಲ 15 ದಿನಗಳಲ್ಲಿ ಹಗರಣ ಲೀಗಲ್ ಆಗಿ ಹೊರಗಡೆ ಬರುತ್ತೆ. ರಾಜ್ಯದ ಹಗರಣದ ಬಗ್ಗೆ ಮಾತ್ನಾಡೋಕ್ಕಿಂತ, ನಮ್ಮ ಜಿಲ್ಲಾ ಉಸ್ತುವಾರಿ ಹಗರಣನೇ ಹೊರಗಡೆ ಬೀಳುತ್ತೆ. ಬಿಜೆಪಿ ಅವರು ಸುಳ್ಳು ಹೇಳ್ತಾರೆ ಎಂದು ಸಚಿವ ಹೇಳ್ತಾನೆ. ಸುಳ್ಳು ಸತ್ಯ ಎನ್ನುವುದು ಇನ್ನು ಕನಿಷ್ಟ 15 ದಿನಗಳಲ್ಲಿ ಹೊರಗಡೆ ಬರುತ್ತೆ. ಆಗಸ್ಟ್ ಕೊನೆವರೆಗೆ ಎಷ್ಟು ಹಗರಣ ಹೊರಗಡೆ ಬರುತ್ತೆ ನೀವೇ ಕಾದು ನೋಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅವರಿಗೆ ಮಾನ ಮರ್ಯಾದೆ ಇಲ್ಲ ಅಂತ ಈ ಸಚಿವ ಹೇಳ್ತಾನೆ. ತಾನು ಸಹ ಮಾನ ಮರ್ಯಾದೆ ಇಲ್ಲದ ಕೆಲಸ ಮಾಡ್ತಾ ಇದ್ದಾನೆ ಎಂದು ಸಚಿವರ ವಿರುದ್ದ ಮಾಜಿ ಶಾಸಕ ಬಸವರಾಜ ದಡೇಸೂಗುರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES