Wednesday, January 22, 2025

ಸಣ್ಣ ದಲಿತ ಹುಡ್ಗನನ್ನು ನಿಲ್ಲಿಸಿದರು ನಾವು ಗೆಲ್ಲಿಸುತ್ತೇವೆ : ಶಾಸಕ ಯತ್ನಾಳ್

ವಿಜಯಪುರ : ಸಾಮಾನ್ಯ ಪೂರ್ವ ದಲಿತ ಯುವಕನನ್ನು ಚುನಾವಣೆಗೆ ಕಣಕ್ಕಿಳಿಸಿದರೂ ನಾವು ನಮ್ಮ ದೇಶದ ಸಲುವಾಗಿ ಗೆಲ್ಲಿಸುತ್ತೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ವಿಚಾರವಾಗಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಮೀಸಲು ಕ್ಷೇತ್ರದ ಚುನಾವಣಾ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಮಹತ್ವವಲ್ಲ. ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಇವರೇ ಇರಲಿ, ಮತ್ಯಾರೆ ಇರಲಿ, ಸಣ್ಣ ದಲಿತ ಹುಡುಗನಿಗೆ ಟಿಕೆಟ್ ಕೊಟ್ಟರೂ ನಾವೆಲ್ಲ ಸೇರಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗದಿದ್ದರೆ, ಪಾಕಿಸ್ತಾನದ ವಾತಾವರಣ ನಮ್ಮ ದೇಶದಲ್ಲಿ ನಿರ್ಮಾಣವಾಗುತ್ತದೆ. ಇಂದು ಪಾಕಿಸ್ತಾನದಲ್ಲಿ ನಿರ್ಮಾಣವಾದಂತ ವಾತಾವರಣವನ್ನು ನಮ್ಮ ದೇಶದಲ್ಲಿ ನಿರ್ಮಾಣವಾಗಲು ನಾವು ಅವಕಾಶ ಬಿಡಬಾರದು. ಹೀಗಾಗಿ, ನರೇಂದ್ರ ಮೋದಿ ಅವರ ಮುಖ ನೋಡಿ ವೋಟು ಹಾಕಬೇಕು ಎಂದು ತಿಳಿಸಿದ್ದಾರೆ.

ಡಿಕೆಶಿ ಆನ್ಸರ್ ಮಾಡಿಲ್ಲ

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ವ್ಯಾಪಕವಾಗಿದೆ. ಕಾಂಗ್ರೆಸ್ ಏಜೆಂಟ್ ಕೆಂಪಣ್ಣ ಅವರನ್ನು ಬಿಟ್ಟು, ಉಳಿದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೀವು ಎಲ್ಲ ಗುತ್ತಿಗೆದಾರರ ಬಳಿ 15% ಕಮಿಷನ್ ಕೇಳಿದ್ದೀರಿ ಅಂತ ಡಿಸಿಎಂ ಡಿಕೆಶಿಗೆ ಓರ್ವ ಗುತ್ತಿಗೆದಾರ ಸವಾಲು ಹಾಕಿದ್ದಾರೆ. ನೀವೇ ನಂಬಿದ ನೊಣವಿನಕೆರೆ ಗುರುಗಳ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿ ಅಂತ ಸವಾಲು ಹಾಕಿದ್ದಾರೆ. ಈ ಕುರಿತು ಡಿಕೆಶಿ ಆನ್ಸರ್ ಮಾಡಿಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES