Monday, February 24, 2025

HDK ಹತಾಶೆಗೊಂಡ್ರೆ ನೋ ಯೂಸ್‌ : ಇಕ್ಬಾಲ್ ಹುಸೇನ್

ರಾಮನಗರ : ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿಗೆ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರಿಗೆ ಬೇರೆ ಯಾವ ವಿಚಾರ ಇಲ್ಲ. ಸುಖಾಸುಮ್ಮನೆ ಆರೋಪ ಮಾಡ್ತಿದ್ದಾರೆ ಅಷ್ಟೇ ಎಂದು ಕುಟುಕಿದ್ದಾರೆ.

ಎಲ್ಲ ಗ್ಯಾರಂಟಿಗಳು ಸಹ ಜನರಿಗೆ ತಲುಪುತ್ತಿವೆ. ಪಕ್ಷಾತೀತವಾಗಿ ಗ್ಯಾರಂಟಿ ತಲುಪುತ್ತಿರೋದು ವಿರೋಧ ಪಕ್ಷಗಳಿಗೆ ಭಯ ಹುಟ್ಟಿಸುತ್ತಿದೆ. ಕುಮಾರಸ್ವಾಮಿ ಸಿಎಂ ಆಗಬೇಕಾದರೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರು ಬಹಳ ಶ್ರಮ ಹಾಕಿದ್ದರು. ಇದನ್ನ ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ಛೇಡಿಸಿದ್ದಾರೆ.

HDK ಅವ್ರು ಹತಾಶೆಗೊಂಡಿದ್ದಾರೆ

ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ, ಎಲ್ಲ ಸಂದರ್ಭದಲ್ಲಿ ನನಗೆ ಅಧಿಕಾರ ಬೇಕು ಅಂದ್ರೆ ಹೇಗೆ? ಇದನ್ನು ಅವರು ತಿದ್ದಿಕೊಳ್ಳಬೇಕು. ಸದ್ಯ ಅವರು ಹತಾಶೆಗೊಂಡಿದ್ದಾರೆ. ಜನ ಅವರಿಗೆ ಎಲ್ಲಾ ರೀತಿಯ ಅಧಿಕಾರ ಕೊಟ್ಟಿದ್ದಾರೆ. ಈಗ ಹತಾಶೆಗೊಂಡರೆ ಯಾವುದೇ ಪ್ರಯೋಜನ ಇಲ್ಲ ಎಂದು ನಯವಾಗಿಯೇ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES