ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಚಂದ್ರಯಾನಾ-3 ಇಂದು ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ.
ಇಂದು ಬೆಳ್ಳಗ್ಗೆ 11.30ಕ್ಕೆ ಚಂದ್ರಯಾನ-3 ಗಗನ ನೌಕೆಯನ್ನು ಚಂದ್ರನ 174 ಕಿಲೋಮೀಟರ್ X 1,437 ಕಿಲೋ ಮೀಟರ್ ಕಕ್ಷೆಗೆ ತರುವ ಪ್ರಕ್ರಿಯೆ ಕೈಗೊಳ್ಳಲಾಯಿತು. ಗಗನ ನೌಕೆಯ ಕಕ್ಷೆ ಬದಲಿಸುವ ಕಾರ್ಯ ಯಶಸ್ವಿಯಾಗಿದೆ. ಇದರಿಂದ ಚಂದ್ರನ ನೆಲಕ್ಕೆ ಗಗನನೌಕೆ ಮತ್ತಷ್ಟು ಹತ್ತಿರವಾದಂತೆ ಆಗಿದೆ.
ಈ ಮೊದಲು ಅಗಸ್ಟ್ 9ರಂದು ಚಂದ್ರಯಾನಾ-3ರ ಕಕ್ಷೆಯನ್ನು ಬದಲಾಯಿಸಲಾಗಿತ್ತು. ಆಗಸ್ಟ್ 5 ರಂದು ಚಂದ್ರಯಾನ-3 ಗಗನ ನೌಕೆಯು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಆಗಸ್ಟ್ 16ರಂದು ಮತ್ತೆ ಗಗನ ನೌಕೆ ಕಕ್ಷೆ ಬದಲಾವಣೆ ಮಾಡಿ, ಚಂದ್ರನ ನೆಲಕ್ಕೆ ಮತ್ತಷ್ಟು ಹತ್ತಿರವಾಗಲಿದೆ. ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧೃವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಲು, ಅದಾದ ಬಳಿಕ ರೋವರ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಲು ಇಸ್ರೋ ಸಂಪೂರ್ಣ ತಯಾರಿ ಮಾಡಿಕೊಂಡಿದೆ.