Wednesday, January 22, 2025

ವೀಕೆಂಡ್ ಮಸ್ತಿಯಲ್ಲಿದ್ದವರಿಗೆ ನಶೆ ಇಳಿಸಿದ ಖಾಕಿ

ಉಡುಪಿ : ವೀಕೆಂಡ್ ಮಸ್ತಿಯಲ್ಲಿದ್ದವರಿಗೆ ಉಡುಪಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಉಡುಪಿಯ ಮಣಿಪಾಲದಲ್ಲಿ ನೂರಕ್ಕು ಹೆಚ್ಚು ಪೊಲೀಸರು ಬೀದಿಗಿಳಿದು ತಪಾಸಣೆ ನಡೆಸಿ ನಶೆಯ ಮಸ್ತಿಯಲ್ಲಿದ್ದವರ ನಶೆ ಇಳಿಸಿದ್ದಾರೆ.

ಕಳೆದ ಕೆಲವು‌ ದಿನಗಳಿಂದ ಮಣಿಪಾಲದಲ್ಲಿ ಯುವಕ-ಯುವತಿಯರಿಗೆ ನಶೆಯೇರಿಸುವ ವಸ್ತುಗಳನ್ನು ನೀಡಿ ಸಂಸ್ಕೃತಿ ಹಾಳು ಮಾಡುತ್ತಿರುವ ಪಬ್​​​ಗಳ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಅರಂಭವಾಗಿತ್ತು. ಇದಕ್ಕೆ ಪೂರಕವೆಂಬಂತೆ ಉಡುಪಿ ಕಾಂಗ್ರೆಸ್ ಪಕ್ಷದ ನಿಯೋಗವೊಂದು ಪಬ್​​ಗಳ ವಿರುದ್ದ ಸಮರ ಸಾರಿತ್ತು.

ಇದರ ಪರಿಣಾಮ ಉಡುಪಿ ಎಸ್​ಪಿ ಅಕ್ಷಯ್ ಮಚ್ಚಿಂದ್ರ, ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಮಣಿಪಾಲದಲ್ಲಿ ಒಂದು ಸಶಸ್ತ್ರ ಪಡೆಯನ್ನು ಇಳಿಸುವುದರ ಜೊತೆಗೆ, ನೂರಕ್ಕೂ ಹೆಚ್ಚು ಪೊಲೀಸ್ ಪಡೆಯನ್ನ ಮಣಿಪಾಲದಲ್ಲಿ ನಿಯೋಜಿಸಿದ್ದಾರೆ. ಸ್ಥಳದಲ್ಲಿ ಪೂರ್ತಿ ಬಂದೂಬಸ್ತ್​​​  ಮಾಡಿದರು.

RELATED ARTICLES

Related Articles

TRENDING ARTICLES