ಆದಿವಾಸಿಗಳ ‘ಕೈ’ ಹಿಡಿದು ರಾಹುಲ್ ಗಾಂಧಿ ನೃತ್ಯ

0
303

ಬೆಂಗಳೂರು : ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಜನರ ಮತ ಸೆಳೆಯಲು ವಿವಿಧ ಪಕ್ಷಗಳ ನಾಯಕರು ಒಂದೊಂದು ರೀತಿಯ ಸರ್ಕಸ್ ಮಾಡುತ್ತಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ತೋಡಾ ಸಮುದಾಯದ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆದರು. ಈ ಸಮಯದಲ್ಲಿ, ಅವರ ಸಾಂಪ್ರದಾಯಿಕ ಶಾಲು ಹೊದ್ದು, ತೋಡಾ ಜನರ ದೇವಾಲಯಕ್ಕೆ ಭೇಟಿ ನೀಡಿದರು ಮತ್ತು ಅವರೊಂದಿಗೆ ನೃತ್ಯ ಮಾಡಿದರು.

ಮೋದಿ ಉಪನಾಮದ ಕುರಿತಾದ ಮಾನನಷ್ಟ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆ ನೀಡಿದ ನಂತರ ರಾಹುಲ್ ಗಾಂಧಿ ಕೇರಳದ ತಮ್ಮ ಕ್ಷೇತ್ರ ವೈನಾಡಿಗೆ ತೆರಳಿದ್ದರು. ಇದೇ ವೇಳೆ ಅವರು ಇಲ್ಲಿನ ಮುತ್ತುನಾಡು ಮಂಡುವಿನಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ ಸಂವಾದ ನಡೆಸಿದರು.

ರಾಹುಲ್ ಗಾಂಧಿ ಅವರು ತೋಡಾ ಬುಡಕಟ್ಟು ಜನಾಂಗದವರೊಂದಿಗೆ ನೃತ್ಯ ಮಾಡಿದರು ಮತ್ತು ಅವರ ಸಾಂಪ್ರದಾಯಿಕ ಆಹಾರವನ್ನೂ ಸವಿದರು.

LEAVE A REPLY

Please enter your comment!
Please enter your name here