ಬೆಂಗಳೂರು : ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ-20 ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದೆ.
ಪೋರ್ಟ್ ಲಾಡರ್ ನಲ್ಲಿ ನಡೆಯುವ ಐದನೇ ಟಿ-20 ಪಂದ್ಯ ಸರಣಿ ನಿರ್ಣಾಯಕವಾಗಲಿದೆ. ಸತತ ಎರಡು ಗೆದ್ದು ಬೀಗಿರುವ ಹಾರ್ದಿಕ್ ಪಾಂಡ್ಯ ಪಡೆ ಇಂದಿನ ಪಂದ್ಯ ಗೆದ್ದು ಟ್ರೋಪಿ ಎತ್ತಿ ಹಿಡಿಯಲು ಹವಣಿಸುತ್ತಿದೆ.
5 ಪಂದ್ಯಗಳ ಟಿ-20 ಸರಣಿಯಲ್ಲಿ ವೆಸ್ಟ್ ಇಂಡೀಸ್ ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ವಿಂಡೀಸ್ ವಿರುದ್ಧ ತಿರುಗಿ ಬಿದ್ದ ಬ್ಲೂ ಬಾಯ್ಸ್ ಎರಡು ಪಂದ್ಯ ಗೆದ್ದು ಕಂ ಬ್ಯಾಕ್ ಮಾಡಿ 2-2 ರಿಂದ ಸರಣಿ ಸಮಬಲ ಸಾಧಿಸಿದೆ. ಹೀಗಾಗಿ, ಕೊನೆಯ ಪಂದ್ಯ ಭಾರಿ ಜಿದ್ದಾಜಿದ್ದಿನಿಂದ ಕೂಡಿರಲಿದೆ.
ಮಳೆ ಅಡ್ಡಿ ಸಾಧ್ಯತೆ
ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಈ ಪಂದ್ಯ ಪೋರ್ಟ್ ಲಾಡರ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಸಂಜೆ ವೇಳೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ವರುಣ ಅಡ್ಡಿಪಡಿಸಿದರೆ ಪಂದ್ಯದ ಓವರ್ ಕಡಿತಗೊಳಿಸಿ ತಂಡಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ : ಜೈ ಹೋ.. ಐತಿಹಾಸಿಕ ಜಯ, ಭಾರತ ಚಾಂಪಿಯನ್
ಭಾರತ ತಂಡ (ಸಂಭಾವ್ಯ)
ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್ (ವಿ.ಕೀ.), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಚಹಲ್, ಮುಖೇಶ್ ಕುಮಾರ್
Series Decider Super Sunday
All to play for in Florida as #TeamIndia takes on West Indies for the 5th & Final T20I #WIvIND pic.twitter.com/RpGSxa6EN3
— BCCI (@BCCI) August 13, 2023
ವೆಸ್ಟ್ ಇಂಡೀಸ್ ತಂಡ (ಸಂಭಾವ್ಯ)
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್ (ವಿ.ಕೀ.), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್, ಅಕೇಲ್ ಹೋಸೇನ್, ಒಬೆಡ್ ಮೆಕಾಯ್